ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಲುವು ಬದಲಿಸಿದ RSS : ಪ್ರೊಫೈಲ್ ಚಿತ್ರ ಚೇಂಜ್

ಹೊಸದಿಲ್ಲಿ: ಆಗಸ್ಟ್ 2ರಿಂದ 15ರವರೆಗೆ ಎಲ್ಲರೂ ತಿರಂಗವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಪ್ರೊಫೈಲ್ ಚಿತ್ರವಾಗಿ ಬಳಸಬೇಕು ಎಂದು ಪ್ರಧಾನಿ ಮನವಿ ಮಾಡಿದ್ದರು. ಪ್ರಧಾನಿ ಮನವಿಯನ್ನು ಪ್ರಶ್ನಿಸಿದ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು, ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ನಿಲುವನ್ನು ಟೀಕಿಸಿದ್ದವು.

ಸಾಮಾಜಿಕ ಜಾಲತಾಣಗಳಲ್ಲಿ ತಿರಂಗ ಬಳಸುವಂತೆ ಮೋದಿಯವರು ಮನವಿ ಮಾಡಿದ್ದಾರೆ. 52 ವರ್ಷ ತನ್ನ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸದ ಅರೆಸ್ಸೆಸ್ ಈ ಸಂದೇಶಕ್ಕೆ ಬದ್ಧವಾಗುತ್ತದೆಯೇ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಪ್ರಶ್ನಿಸಿದ್ದರು.

ಸದ್ಯ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಶುಕ್ರವಾರ ತನ್ನ ಸಾಮಾಜಿಕ ಜಾಲತಾಣ ಖಾತೆಗಳ ಪ್ರೊಫೈಲ್ ಚಿತ್ರಗಳಲ್ಲಿ ಸಾಂಪ್ರದಾಯಿಕ ಕೇಸರಿ ಧ್ವಜದ ಬದಲು ರಾಷ್ಟ್ರಧ್ವಜ ಚಿತ್ರವನ್ನು ಹಾಕಿದೆ.

ಶುಕ್ರವಾರ ಆರೆಸ್ಸೆಸ್ ಪ್ರಚಾರ ವಿಭಾಗದ ಮುಖ್ಯಸ್ಥ ನರೇಂದ್ರ ಠಾಕೂರ್ ಹೇಳಿಕೆ ನೀಡಿ, ಸಂಘದ ಎಲ್ಲ ಶಾಖೆಗಳಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನವನ್ನು ಸಂಘ ಆಚರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Edited By : Nirmala Aralikatti
PublicNext

PublicNext

14/08/2022 07:37 am

Cinque Terre

65.33 K

Cinque Terre

16

ಸಂಬಂಧಿತ ಸುದ್ದಿ