ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ: ಕಲುಷಿತ ನೀರು ಪೂರೈಕೆ : ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ರಾಮನಗರ: ರಾಮನಗರ ನಗರದ ಬಿಇಒ ಕಚೇರಿ ಪಕ್ಕದಲ್ಲಿರುವ ನೆಹರೂ ಉದ್ಯಾನವನದಲ್ಲಿ ನಗರಸಭೆಯ ತ್ಯಾಜ್ಯ ಸಂಗ್ರಹಿಸುವ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.

ಇನ್ನು ತ್ಯಾಜ್ಯದ ವಾಹನಗಳಲ್ಲಿನ ನೀರು 1 ರಿಂದ 10 ನೇ ವಾರ್ಡ್ ಗೆ ಪೂರೈಸುವ ನೀರಿನ ವಾಲ್ ಗೆ ಹೋಗುತ್ತಿದೆ. ಇದರಿಂದ ನಾಗರಿಕರು ಕಲುಷಿತ ನೀರನ್ನು ಕುಡಿದು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಕಲುಷಿತ ನೀರು ಪೂರೈಕೆಯಾಗುತ್ತಿರುವುದು ಜಲಮಂಡಳಿ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳಿಗೆ ಗೊತ್ತಿದ್ದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲಾದರೂ ಅಧಿಕಾರಿಗಳು ಹೆಚ್ಚೆತ್ತು ಕಲುಷಿತ ನೀರು ಪೂರೈಸುವದನ್ನು ನಿಲ್ಲಿಸಬೇಕು, ಎಂದು ನಗರಸಭೆ ಸದಸ್ಯ ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ವರದಿ: ಅರಕೇಶ್, ಎಸ್. ರಾಮನಗರ

Edited By : Nagesh Gaonkar
PublicNext

PublicNext

10/08/2022 10:35 am

Cinque Terre

38.3 K

Cinque Terre

0

ಸಂಬಂಧಿತ ಸುದ್ದಿ