ದಾವಣಗೆರೆ: ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯನವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ನಾಳೆ (ಆಗಸ್ಟ್ 3ರಂದು) ದಾವಣಗೆರೆಯಲ್ಲಿ 'ಸಿದ್ದರಾಮೋತ್ಸವ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಮಳೆಯ ಅಡ್ಡಿಯಾಗುವ ಸಾಧ್ಯತೆ ಇದೆ.
ನಗರದಲ್ಲಿ ಇಂದು ಬೆಳಗಿನ ಜಾವ ಸುರಿದ ಭಾರಿ ಮಳೆಯಿಂದಾಗಿ ಸಿದ್ದರಾಮೋತ್ಸವದ ಫ್ಲೆಕ್ಸ್ ಹಾಗೂ ಬಂಟಿಂಗ್ಸ್ ನೆಲಕ್ಕುರುಳಿವೆ. ಮಳೆ ಹೀಗೆಯೇ ಮುಂದುವರಿದಲ್ಲಿ ಇನ್ನಷ್ಟು ಅವಾಂತರವಾಗುವ ಸಾಧ್ಯತೆ ಇದೆ.
ರಾಜ್ಯದ ವಿವಿಧ ಭಾಗದಿಂದ ಜನರನ್ನು ಕರೆತರಲು 7 ಸಾವಿರಕ್ಕೂ ಹೆಚ್ಚು ಬಸ್ಗಳು ಬುಕ್ ಆಗಿವೆ. ಕಾರ್ಯಕ್ರಮಕ್ಕೆ ಬರುವ ಜನರಿಗೆ ಭೋಜನನ್ನು ಸಹ ಏರ್ಪಡಿಸಲಾಗಿದೆ. ಬಹಳ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಸುವ ಮೂಲಕ ಸಿಎಂ ಸ್ಥಾನಕ್ಕಾಗಿ ಹೈಕಮಾಂಡ್ಗೆ ಸ್ಪಷ್ಟ ಸಂದೇಶ ರವಾನಿಸುವ ಉದ್ದೇಶ ಈ ಸಿದ್ದರಾಮೋತ್ಸವದ ಹಿಂದಿದೆ ಎಂದು ರಾಜಕೀಯಲ ವಯಲದಲ್ಲಿ ಚರ್ಚಿತವಾಗಿದೆ.
PublicNext
02/08/2022 02:32 pm