ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರವೀಣ್ ಹತ್ಯೆ : ಕಾರ್ಯಕರ್ತರ ಜೊತೆ ತೇಜಸ್ವಿ ಸೂರ್ಯ ಮಾತುಕತೆ ಆಡಿಯೋ ವೈರಲ್

ಚಿಕ್ಕಮಗಳೂರು : “ಕಾಂಗ್ರೆಸ್ ಸರ್ಕಾರವಾಗಿದ್ದರೆ ಕಲ್ಲು ಹೊಡೆಯಬಹುದಿತ್ತು. ನಮ್ಮದೇ ಸರ್ಕಾರ ಇದೆ, ಏನು ಮಾಡುವುದು”. ಇದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಮಾತನಾಡಿದ್ದು ಎನ್ನುವ ಆಡಿಯೋ ವೈರಲ್ ಆಗಿದೆ.

ಹೌದು ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ.

ಇದರ ಬೆನ್ನಲ್ಲೆ ತೇಜಸ್ವಿ ಸೂರ್ಯ ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಅರವಿನಗಂಡಿ ಜೊತೆ ಮಾಡಿದ ಆಡಿಯೋ ರಾಜಕೀಯ ರಂಗದಲ್ಲಿ ಕೋಲಾಹಲ ಸೃಷ್ಟಿಸುವಂತಿದೆ.

ಆಡಿಯೋ ಸಂಭಾಷಣೆ ಹೀಗಿದೆ.

ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಅರವಿನಗಂಡಿ ಜೊತೆ ತೇಜಸ್ವಿ ಸೂರ್ಯ ದೂರವಾಣಿ ಕರೆಯಲ್ಲಿ ‘ಕಾರ್ಯಕರ್ತರ ಸಾವು ಜಾಸ್ತಿಯಾಗಿದೆ. ಇದರ ಬಗ್ಗೆ ನಾಯಕರು ಯಾರೂ ಗಮನ ಹರಿಸುತ್ತಿಲ್ಲ ಎಂದ ಸಂದೀಪ್ ಗೆ ಉತ್ತರಿಸಿದ ತೇಜಸ್ವಿ ಸೂರ್ಯ ‘ಹೌದು ನಿಮ್ಗೆ ಎಷ್ಟು ಆಕ್ರೋಶವಿದೆಯೋ ನಮಗೂ ಅಷ್ಟೇ ಆಕ್ರೋಶವಿದೆ.ಕಾಂಗ್ರೆಸ್ ಸರ್ಕಾರವಾಗಿದ್ದರೆ ಕಲ್ಲು ಹೊಡೆಯಬಹುದಿತ್ತು, ನಮ್ಮದೇ ಸರ್ಕಾರ ಇದೇ, ಏನು ಮಾಡುವುದು” ಎಂದಿದ್ದಾರೆ.

ಸಾಮೂಹಿಕ ರಾಜೀನಾಮೆ ನೀಡಿರುವ ಕುರಿತು ಮಾತುಕತೆ ನಡೆಸಿರುವ ತೇಜಸ್ವಿ ಸೂರ್ಯ, ನೀವುಗಳು ರಾಜೀನಾಮೆ ವಾಪಾಸ್ ತೆಗೆದುಕೊಳ್ಳಿ. ಎಲ್ಲಾ ಜಿಲ್ಲಾಧ್ಯಕ್ಷರು ಸೇರಿ ಸಿಎಂ ಭೇಟಿ ಮಾಡೋಣ ಎಂದಿದ್ದಾರೆ.

Edited By : Nirmala Aralikatti
PublicNext

PublicNext

28/07/2022 05:26 pm

Cinque Terre

66.28 K

Cinque Terre

16

ಸಂಬಂಧಿತ ಸುದ್ದಿ