ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೋಪ ತಣಿಸಲು ಬಿ.ವೈ.ವಿಜಯೇಂದ್ರಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಡುವ ಸಾಧ್ಯತೆ ಈಗ ಹೆಚ್ಚಿದೆ.
ಆಗಸ್ಟ್ ಮೊದಲ ವಾರದಲ್ಲಿಯೇ ರಾಜ್ಯ ಸಚಿವ ಸಂಪುಟ ವಿಸ್ತಣೆ ಆಗೋ ಸಾಧ್ಯತೆ ಜಾಸ್ತಿ ಇದೆ. ಈ ಸಲದ ಸಂಪುಟದಲ್ಲಿ ವಿಜಯೇಂದ್ರಗೆ ಹೈಕಮಾಂಡ್ ಮಣೆ ಆಗೋ ಸಾಧ್ಯತೆ ಇದೆ ಎಂದು ಚಾನ್ಸಸ್ ಇದೆ.
ಶಿಕಾರಿಪುರದಿಂದಲೇ ಬಿ.ವೈ.ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದೇ ತಡ, ಸಿಎಂ ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್, ಬಿ.ಎಸ್.ವೈ ಅವರನ್ನ ಭೇಟಿಯಾಗಿದ್ದಾರೆ. ಮಾತುಕತೆಯನ್ನೂ ನಡೆಸಿದ್ದಾರೆ.
ರಾಜಕೀಯದಿಂದ ಹಿಂದೆ ಸರಿಯುವ ಬಿ.ಎಸ್.ವೈ ಘೋಷಣೆಯಿಂದ ಪಕ್ಷದ ವಲಯದಲ್ಲಿ ಆಘಾತ ಉಂಟಾಗಿದೆ. ಕಾರಣ, ವೀರಶೈವ-ಲಿಂಗಾಯತ ಸಮುದಾಯವನ್ನ ಮುಂದಿನ ಚುನಾವಣೆಗೆ ಬಳಸಿಕೊಳ್ಳುವ ಪ್ಲಾನ್ ಗೆ ಏಟು ಬಿದ್ದಂತಾಗಿದೆ.
ಈ ಹಿನ್ನೆಲೆಯಲ್ಲಿಯೇ ಹೈಕಮಾಂಡ್ ವಿಜಯೇಂದ್ರರನ್ನ ಸಚಿವರಾಗಿಸೋ ಬಿ.ಎಸ್.ವೈ ಬೇಡಿಕೆಗೆ ಹೈಕಮಾಂಡ್ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ. ಆಗಸ್ಟ್-11 ರಂದು ನಡೆಯಲಿರೋ ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರ ಅವರನ್ನ ವಿಧಾನ ಪರಿಷತ್ ಸದಸ್ಯರನ್ನಾಗಿಸೋ ಮೂಲಕ ಪ್ರಕ್ರಿಯೆ ಶುರು ಆಗುತ್ತದೆ ಎಂದು ತಿಳಿದು ಬಂದಿದೆ.
PublicNext
25/07/2022 01:40 pm