ದಾವಣಗೆರೆ: ಇನ್ನು ಚುನಾವಣೆಯೇ ಘೋಷಣೆ ಆಗಿಲ್ಲ. ಸ್ವತಃ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರು ಸಿಎಂ ಆಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದಿದ್ದರೂ, ಅಭಿಮಾನಿಗಳು ಮಾತ್ರ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಜೈ ಎಂಬ ಘೋಷಣೆ ಹಾಕುವುದನ್ನು ನಿಲ್ಲಿಸಿಲ್ಲ.
ಬಾಪೂಜಿ ಗೆಸ್ಟ್ ಹೌಸ್ ಗೆ ಬಂದು ವಿಶ್ರಾಂತಿ ಪಡೆದ ಬಳಿಕ ಹೊರಗಡೆ ಬರುವಾಗ ನೆರೆದಿದ್ದ ನೂರಾರು ಸಂಖ್ಯೆಯ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಾಲೇ ಪದೇ ಪದೆ ಘೋಷಣೆ ಹಾಕಿದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ವಿಜಯದ ಸಂಕೇತ ತೋರಿ ಕಾರಿನಲ್ಲಿ ಹೊರಟರು.
ಇನ್ನು, ಕಾಂಗ್ರೆಸ್ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರ ಮನೆಗೆ ಬಂದಿದ್ದ ಸಿದ್ದರಾಮಯ್ಯ ಅಲ್ಲಿಯೇ ಊಟ ಮಾಡಿದರು. ಈ ಸಂದರ್ಭ ಶ್ಯಾಮನೂರು ಶಿವಶಂಕರಪ್ಪ ಜತೆ ಹತ್ತು ನಿಮಿಷ ಚರ್ಚೆ ನಡೆಸಿದರು. ಈ ವೇಳೆಯೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಿದ್ದರಾಮಯ್ಯರೊಂದಿಗೆ ಸೆಲ್ಫಿಗೆ ಮುಗಿಬಿದ್ದರು. ಇದಾದ ಬಳಿಕ ಹೊರಗಡೆ ಬಂದ ಸಿದ್ದರಾಮಯ್ಯ ಅವರಿಗೆ ಮುಂದಿನ ಸಿಎಂ ಸಿದ್ದರಾಮಯ್ಯ ಅಂತಾ ಕೂಗಿದರು. ಈ ವೇಳೆ ಕೆಲವರು, ಹೌದು ಹುಲಿಯಾ ಅಂತಾಲೂ ಘೋಷಣೆ ಹಾಕಿದರು.
PublicNext
12/07/2022 08:06 pm