ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗ ಜಗನ್​ಮೋಹನ್​ ರೆಡ್ಡಿ ಪಕ್ಷಕ್ಕೆ ರಾಜೀನಾಮೆ ನೀಡಿ ಮಗಳ ಪಕ್ಷಕ್ಕೆ ಬೆಂಬಲ ಸೂಚಿಸಿದ ವೈ.ಎಸ್‌.ವಿಜಯಮ್ಮ

ಗುಂಟೂರು: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ತಾಯಿ ವೈ.ಎಸ್ ವಿಜಯಮ್ಮ ಅವರು ಶುಕ್ರವಾರ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಗೌರವಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ನೆರೆಯ ರಾಜ್ಯದಲ್ಲಿ ವೈಎಸ್ಆರ್ ತೆಲಂಗಾಣ ಪಕ್ಷದ ನೇತೃತ್ವ ವಹಿಸಿರುವ ಮಗಳು ಶರ್ಮಿಳಾ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚಿನಕಾಕಣಿಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ವೈ.ಎಸ್.ವಿಜಯಮ್ಮ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ವೈ.ಎಸ್​.ಜಗನ್​ಮೋಹನ್​ ರೆಡ್ಡಿ ಅವರ ತಾಯಿ ಆಗಿರುವ ವಿಜಯಮ್ಮ, ನನ್ನಿಂದ ಯಾರಿಗೂ ಯಾವುದೇ ಅಭ್ಯಂತರ ಉಂಟಾಗಬಾರದು ಎಂದು ನಾನು ರಾಜೀನಾಮೆ ನೀಡುವ ನಿರ್ಣಯ ಮಾಡಿದ್ದೇನೆ. ಇದಕ್ಕಾಗಿ ನನ್ನನ್ನು ಕ್ಷಮಿಸಿ ಎಂದೂ ತಿಳಿಸಿದ್ದಾರೆ.

ದಿ.ವೈ.ಎಸ್​.ರಾಜಶೇಖರ ರೆಡ್ಡಿ ಪತ್ನಿಯಾಗಿ ಮತ್ತು ಶರ್ಮಿಳಾ ತಾಯಿಯಾಗಿ ನಾನು ತೆಲಂಗಾಣದಲ್ಲಿ ಹೊಸ ಪಕ್ಷದ ಪರವಾಗಿ ನಿಲ್ಲುವ ಅವಶ್ಯಕತೆ ಇದೆ. ಇಂದು ಜಗನ್​ ಮತ್ತು ಶರ್ಮಿಳಾ ಬೇರೆ- ಬೇರೆ ಪಕ್ಷಗಳು ಮತ್ತು ರಾಜ್ಯಗಳನ್ನು ಪ್ರತಿನಿಧಿಸುವ ಅನಿರ್ವಾಯತೆ ಯಾಕೆ ಬಂದಿದೆ ಆ ದೇವರಿಗೆ ಗೊತ್ತು. ಕಷ್ಟದಲ್ಲಿದ್ದಾಗ ನಾನು ಜಗನ್​ ಜೊತೆಗಿದ್ದೆ, ಸಂತೋಷವಾಗಿದ್ದಲೂ ನಾನು ಆತನ ಜೊತೆಗಿದ್ದರೆ ನನ್ನ ಮಗಳು ಶರ್ಮಿಳಾಗೆ ಅನ್ಯಾಯ ಮಾಡುತ್ತಿದ್ದೇನೆ ಎಂದು ನನ್ನ ಮನಸಾಕ್ಷಿ ಹೇಳುತ್ತಿದೆ ಎಂದು ವಿಜಯಮ್ಮ ಹೇಳಿದ್ದಾರೆ.

Edited By : Vijay Kumar
PublicNext

PublicNext

08/07/2022 05:02 pm

Cinque Terre

105.92 K

Cinque Terre

3

ಸಂಬಂಧಿತ ಸುದ್ದಿ