ಮುಂಬೈ:ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿಗೆ ತೆರೆ ಬಿದ್ದಿದೆ. ಸುಪ್ರೀಂ ಕೋರ್ಟ್ ವಿಶ್ವಾಸ ಮತಯಾಚನೆಗೆ ನಿರಾಕರಿಸಿದ್ದೇ ತಡ, ಉದ್ದವ್ ಠಾಕ್ರೆ ತಾವೇ ಸ್ವತಃ ಕಾರ್‌ಚಾಲಾಯಿಸಿಕೊಂಡು ರಾಜಭವನಕ್ಕೆ ಬಂದೆ ಬಿಟ್ಟರು. ರಾಜ್ಯಪಾಲರಿಗೆ ರಾಜೀನಾಮೆ ಕೊಟ್ಟೇ ಬಿಟ್ಟರು.
ಹೌದು.ಸುಪ್ರೀಂ ಕೋರ್ಟ್ ವಿಶ್ವಾಸ ಮತಕ್ಕೆ ತಡೆ ನೀಡಿದ ಕೂಡಲೇ, ಉದ್ದವ್ ಠಾಕ್ರೆ ಫೇಸ್ ಬುಕ್‌ನಲ್ಲಿ ಲೈವ್ ಬಂದರು. ರಾಜೀನಾಮೆಯನ್ನೂ ಘೋಷಿಸಿದರು. ಬಳಿಕ ನೇರವಾಗ ಕಾರ್ ಚಾಲಯಿಸಿಕೊಂಡು ರಾಜಭವನಕ್ಕೂ ಬಂದು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ರಾಜೀನಾಮೆ ಪತ್ತ ಕೊಟ್ಟರು.
ಇದಾದ ಬಳಿಕ ಉದ್ದವ್ ಠಾಕ್ರೆ ಪುತ್ರನ ಜೊತೆಗೆ ದೇವಸ್ಥಾನಕ್ಕೂ ಭೇಟಿಕೊಟ್ಟು ಪೂಜೆ ಸಲ್ಲಿಸಿದರು.
PublicNext
30/06/2022 02:32 pm