ನವದೆಹಲಿ: ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿಯನ್ನ ಸತತ ಎರಡನೇ ದಿನವೂ ವಿಚಾರಣೆ ನಡೆಸುತ್ತಿದೆ. ಇದನ್ನ ಖಂಡಿಸಿ ಕಾಂಗ್ರೆಸ್ ಪಕ್ಷದ ನಾಯಕ ರಣದೀಪ್ ಸುರ್ಜೇವಾಲಾ,ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸರ್ಕಾರ ಯಾಕೆ ರಾಹುಲ್ ಗಾಂಧಿಯನ್ನ ಟಾರ್ಗೆಟ್ ಮಾಡುತ್ತಿದೆ. ರಾಹುಲ್ ಗಾಂಧಿ ರೈತರ ಪರ ಧ್ವನಿ ಎತ್ತಿದ್ದಾರೆ. ಜನರ ಪರವೇ ಇದ್ದಾರೆ. ಇದಕ್ಕೇನಾ ಟಾರ್ಗೆಟ್ ಆಗ್ತಿರೋದು ? ರಾಹುಲ್ ಮತ್ತು ಕಾಂಗ್ರೆಸ್ ಅನ್ನೆ ಯಾಕೆ ಮೋದಿಯ ಬಿಜೆಪಿ ಸರ್ಕಾರ ಟಾರ್ಗೆಟ್ ಮಾಡ್ತಿದೆ ಅಂತಲೇ ಸುರ್ಜೇವಾಲಾ ಪ್ರಶ್ನೆ ಮಾಡಿದ್ದಾರೆ.
ರಾಹುಲ್ ಗಾಂಧಿ ನಡೆ ಗಟ್ಟಿಯಾಗಿಯೇ ಇದೆ. ಇವರ ಈ ಒಂದು ಗಟ್ಟಿ ಧ್ವನಿಗೆ ಈಗ ಮೋದಿ ಸರ್ಕಾರ ಹೆದರುತ್ತಿದೆ ಅಂತಲೂ ಟೀಕಿಸಿದ್ದಾರೆ ಸುರ್ಜೇವಾಲಾ. ಭ್ರಷ್ಟ ನಾಯಕರೆಲ್ಲ ಬಿಜೆಪಿ ಸೇರಿದರೆ ಪರಿಶುದ್ಧರಾಗುತ್ತಾನಾ ಅನ್ನೋ ಪ್ರಶ್ನೆಯನ್ನ ಕೂಡ ಇಲ್ಲಿ ಸುರ್ಜೇವಾಲಾ ಕೇಳಿದ್ದಾರೆ.
PublicNext
14/06/2022 01:55 pm