ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್‌ನಿಂದ ಹೊರಬಂದು ಬಿಜೆಪಿಯನ್ನ ಹೊಗಳಿದ ಹಾರ್ದಿಕ್ ಪಟೇಲ್​

ಗಾಂಧಿನಗರ: ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ಬಂದಿರುವ ಗುಜರಾತ್​ನ ಹಾರ್ದಿಕ್ ಪಾಟೀಲ್ ಬಿಜೆಪಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇಂದು ಮಹತ್ವದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಾರು 3 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ಕೇವಲ ಪ್ರತಿಭಟನೆಯ ರಾಜಕೀಯಕ್ಕೆ ಇಳಿದಿರುವುದನ್ನು ನಾನು ಕಂಡುಕೊಂಡಿದ್ದೇನೆ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರವಾಗಲಿ, ಸಿಎಎ-ಎನ್‌ಆರ್‌ಸಿ ಸಮಸ್ಯೆಯಾಗಲಿ, ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿ ರದ್ದು ಪಡಿಸಿದ್ದಾಗಲಿ ಅಥವಾ ಜಿಎಸ್‌ಟಿ ಜಾರಿಯಾಗಲಿ, ದೇಶವು ದೀರ್ಘಕಾಲದಿಂದ ಪರಿಹಾರವನ್ನು ಬಯಸಿದೆ ಮತ್ತು ಕಾಂಗ್ರೆಸ್ ಪಕ್ಷವು ಕೇವಲ ಅಡ್ಡಿಯುಂಟು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ದೇಶದಲ್ಲಿ ನಡೆಯುತ್ತಿರುವ ಹಿಂದೂ ಪರ ಬೆಳವಣಿಗೆಗಳಿಂದ ಕಾಂಗ್ರೆಸ್ ಪಕ್ಷ ದೂರ ಇರುವುದು ಪಕ್ಷಕ್ಕೆ ಹಾನಿಯನ್ನುಂಟು ಮಾಡಿದ್ದು, ಇದಕ್ಕೆ ಜ್ಞಾನವಾಪಿ ಮಸೀದಿ ವಿವಾದ ಪ್ರಮುಖ ಉದಾಹರಣೆ. ದೇಶದಲ್ಲಿ ಅನೇಕರು ಮಹಾದೇವನ ಭಕ್ತರಿದ್ದಾರೆ. ಮಸೀದಿ ಅಥವಾ ಇತರ ಸ್ಥಳಗಳಲ್ಲಿ ಶಿವಲಿಂಗ ಪತ್ತೆಯಾದಾಗ ನಮ್ಮ ನಂಬಿಕೆಗಳು ಮತ್ತಷ್ಟು ಬಲಗೊಳ್ಳುತ್ತವೆ. ಇದನ್ನು ಎಲ್ಲರೂ ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ಆದರೆ ಕಾಂಗ್ರೆಸ್​ ನಾಯಕರು ಅಂತಹ ನಿರ್ಧಾರ ಅಥವಾ ಹೇಳಿಕೆಗಳಿಂದ ದೂರ ಸರಿಯತ್ತಾರೆ ಎಂದರು.

ಗುಜರಾತ್​ನಲ್ಲಿ ಕಾಂಗ್ರೆಸ್ ನಾಯಕರು ಇಲ್ಲಿನ ಜನರ ವಿರುದ್ಧ ಪಕ್ಷಪಾತ ಮಾಡ್ತಿದ್ದು, ಇದು ಪಕ್ಷದಲ್ಲಿ ದೊಡ್ಡ ಮಟ್ಟದ ಸಮಸ್ಯೆ ಉದ್ಭವವಾಗುವಂತೆ ಮಾಡಿದೆ ಎಂದರು.

Edited By : Vijay Kumar
PublicNext

PublicNext

19/05/2022 07:40 pm

Cinque Terre

51.06 K

Cinque Terre

10

ಸಂಬಂಧಿತ ಸುದ್ದಿ