ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ-ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಜೋಶಿ

ಧಾರವಾಡ: ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಈಗೊಂದು ಘೋಷಣೆ ಮಾಡಿದ್ದಾರೆ. ಇದು ಧಾರವಾಡ ಮತ್ತು ಬೆಂಗಳೂರು ಪ್ರಯಾಣಿಸೋ ಜನರಿಗೆ ಸಿಹಿ ಸುದ್ದಿನೇ ಆಗಿದೆ.ಬನ್ನಿ, ಹೇಳ್ತಿವಿ.

ಧಾರವಾಡ-ಬೆಂಗಳೂರು ರೈಲು ಪ್ರಯಾಣದ ಟೈಮ್ ಅನ್ನ ನಾವು ಇನ್ನೂ ಕಡಿಮೆ ಮಾಡುತ್ತೇವೆ. ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆನೂ ಆಗಿದೆ ಅಂತಲೂ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಧಾರವಾಡ ಮತ್ತು ಬೆಂಗಳೂರು ಬ್ರಾಡ್‌ಗೇಜ್ ಮಾಡಲು 20 ವರ್ಷಗಳೇ ಕಳೆದು ಹೋಗಿವೆ. ಆದರೆ, ನಾವು ಮುಂದಿನ ವರ್ಷ 2023 ರ ಒಳಗಾಗಿಯೇ ರೈಲು ಡಬ್ಲಿಂಗ್ ಪೂರ್ಣಗೊಳಿಸುತ್ತೇವೆ ಎಂದು ಜೋಶಿ ವಿವರಿಸಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ಅವರೂ ಈ ಒಂದು ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಈ ಮೂಲಕ ಧಾರವಾಡ ಮತ್ತು ಬೆಂಗಳೂರು ಪ್ರಯಾಣದ ಸಮಯವನ್ನ ನಾಲ್ಕುವರೆ ಗಂಟೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

Edited By :
PublicNext

PublicNext

16/05/2022 08:30 am

Cinque Terre

44.49 K

Cinque Terre

6

ಸಂಬಂಧಿತ ಸುದ್ದಿ