ಕಲಬುರಗಿ : ಕರ್ನಾಟಕದಲ್ಲಿ ಹಲವು ಕೋಮು ಸೂಕ್ಷ್ಮ ವಿವಾದಗಳ ಬಳಿಕ ಅಝಾನ್ ಹಾಗೂ ಭಜನೆ ವಿವಾದ ತೀವ್ರಗೊಂಡಿದೆ. ಮಸೀದಿಗಳ ಮೇಲಿನ ಧ್ವನಿವರ್ಧಕ ತೆರವಿಗೆ ನೀಡಿದ್ದ ಗಡುವು ಇಂದು ಮುಕ್ತಾಯಗೊಂಡಿದೆ.ಇತ್ತ ಶ್ರೀರಾಮಸೇನೆ ಅಜಾನ್ ಗೆ ಪರ್ಯಾಯವಾಗಿ ಸುಪ್ರಭಾತ, ಹನುಮಾನ್ ಚಾಲೀಸಾ ಪಠಣೆ ಅಭಿಯಾನ ಮಾಡಲಾಗುತ್ತಿದೆ. ಆದರೆ ಕಲಬುರಗಿಯ ಸೂಪರ್ ಮಾರ್ಕೆಟ್ ನ ಮೆಹಬಾಸ್ ಮಸೀದಿ ಬಳಿ ದಲಿತ ಸಂಘಟನೆ ಕಾರ್ಯಕರ್ತರು ಮಸೀದಿಗೆ ರಕ್ಷಣೆ ನೀಡಿದ್ದಾರೆ. ಈ ಮೂಲಕ ಶ್ರೀರಾಮಸೇನೆ ಅಭಿಯಾನಕ್ಕೆ ದಲಿತ ಸೇನೆ ಟಕ್ಕರ್ ಕೊಟ್ಟಿದೆ.
ಮಸೀದಿ ಸಮೀಪ ಭಜನೆ, ಮಂತ್ರ ಪಠಣೆಗೆ ಅವಕಾಶ ನೀಡಬಾರದು ಎಂದು ದಲಿತ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಮಸೀದಿ ಸಮೀಪ ಶ್ರೀರಾಮಸೇನೆಯಿಂದ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
PublicNext
09/05/2022 08:04 pm