ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ಆಫರ್ ತಿರಸ್ಕರಿಸಿದ ಪ್ರಶಾಂತ್ ಕಿಶೋರ್: 'ಕೈ' ಸೇರಲು ನಕಾರ

ನವದೆಹಲಿ: ಕಾಂಗ್ರೆಸ್‌ನ ಸರಣಿ ಸಭೆಗಳ ನಂತರ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಸೇರುವುದಿಲ್ಲ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಣದೀಪ್ ಸುರ್ಜೇವಾಲಾ, "ಪ್ರಶಾಂತ್ ಕಿಶೋರ್ ಅವರ ಪ್ರಸ್ತುತಿ ಮತ್ತು ಚರ್ಚೆಯ ನಂತರ, ಕಾಂಗ್ರೆಸ್ ಅಧ್ಯಕ್ಷರು ಸಶಕ್ತ ಕ್ರಿಯಾ ಗುಂಪು 2024 ಅನ್ನು ರಚಿಸಿದ್ದಾರೆ ಮತ್ತು ನಿರ್ದಿಷ್ಟ ಜವಾಬ್ದಾರಿ ಹೊಂದಿರುವ ಗುಂಪಿನ ಭಾಗವಾಗಿ ಪಕ್ಷಕ್ಕೆ ಸೇರಲು ಅವರನ್ನು ಆಹ್ವಾನಿಸಿದ್ದಾರೆ. ಆದರೆ ಅವರು ನಿರಾಕರಿಸಿದರು. ಅವರ ಪ್ರಯತ್ನಗಳು ಮತ್ತು ಪಕ್ಷಕ್ಕೆ ನೀಡಿದ ಸಲಹೆಯನ್ನು ನಾವು ಶ್ಲಾಘಿಸುತ್ತೇವೆ' ಎಂದು ತಿಳಿಸಿದ್ದಾರೆ.

ಇನ್ನು ಪ್ರಶಾಂತ್ ಕಿಶೋರ್ ಕೂಡ ಟ್ವೀಟ್ ಮಾಡಿ, 'ಇಎಜಿಯ ಭಾಗವಾಗಿ ಪಕ್ಷಕ್ಕೆ ಸೇರಲು ಮತ್ತು ಚುನಾವಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಕಾಂಗ್ರೆಸ್‌ನ ಉದಾರ ಪ್ರಸ್ತಾಪವನ್ನು ನಾನು ನಿರಾಕರಿಸಿದೆ. ನನ್ನ ವಿನಮ್ರ ಅಭಿಪ್ರಾಯದಲ್ಲಿ, ಪರಿವರ್ತನೆಯ ಸುಧಾರಣೆಗಳ ಮೂಲಕ ಆಳವಾಗಿ ಬೇರೂರಿರುವ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಪಕ್ಷಕ್ಕೆ ನಾಯಕತ್ವ ಮತ್ತು ಸಾಮೂಹಿಕ ಇಚ್ಛಾಶಕ್ತಿಯ ಅಗತ್ಯವಿದೆ' ಎಂದು ಕಾಂಗ್ರೆಸ್‌ಗೆ ಕಿವಿ ಮಾತು ನೀಡಿದ್ದಾರೆ.

Edited By : Vijay Kumar
PublicNext

PublicNext

26/04/2022 04:31 pm

Cinque Terre

40.69 K

Cinque Terre

8

ಸಂಬಂಧಿತ ಸುದ್ದಿ