ಮೈಸೂರು: ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಕೇಳಿ ಬಂದ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ದೇವೇಗೌಡ ರಾಜಕಾರಣದಲ್ಲಿ ಯಾರು ಸಂತ್ಯವಂತರು? ಎಂದು ಪ್ರಶ್ನೆ ಮಾಡಿದ್ದಾರೆ.
ಮೈಸೂರಿನ ಎಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಏನೂ ಮಾಡಿಯೇ ಇಲ್ವಾ? ಇಲ್ಲಿ ಯಾರು ಸಾಚಾ ಇದ್ದಾರೆ ಹೇಳಿ? ಅವರ ಮೇಲೆ ಇವರು ಆರೋಪ ಮಾಡ್ತಾರೆ. ಇವರ ಮೇಲೆ ಅವರು ಆರೋಪ ಮಾಡ್ತಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ 10% ಸರ್ಕಾರ ಅಂತ ಸ್ವತಃ ಪ್ರಧಾನಿಯೇ ಆರೋಪ ಮಾಡಿದ್ರು. ಆಗ ನಾನು ಏನೂ ಹೇಳಿರಲಿಲ್ಲ. ಈಗಲೂ ಅಷ್ಟೇ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡೋದಿಲ್ಲ. ರಾಜಕಾರಣ ಹೇಳಲಾಗದಷ್ಟು ಕೆಟ್ಟು ಹೋಗಿದೆ. ರಾಜಕಾರಣ ಹೇಳಲಾಗದಷ್ಟು ಹೋಗಿದೆ. ಭ್ರಷ್ಟಾಚಾರ ಎಲ್ಲ ಕಡೆ ತುಂಬಿ ಹೋಗಿದೆ ಎಂದು ದೇವೇಗೌಡ ಹೇಳಿದ್ದಾರೆ.
PublicNext
16/04/2022 03:51 pm