ದಾವಣಗೆರೆ: ಸಚಿವ ಸ್ಥಾನಕ್ಕೆ ಕೆ.ಎಸ್. ಈಶ್ವರಪ್ಪನವರು ಹಠಕ್ಕೆ ಬಿಳದೇ ರಾಜೀನಾಮೆ ಕೊಡುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡ್ ಗ್ರಾಮದಲ್ಲಿ ಮಾತನಾಡಿದ ಅವರು, ರಾಜೀನಾಮೆ ಕೊಟ್ಟ ನಂತರ ಇವರ ಪಾತ್ರದ ಬಗ್ಗೆ ಅವರೇ ಸಾಬೀತುಪಡಿಸಬೇಕು. ಇದರಲ್ಲಿ ಬಿಜೆಪಿ ಪಕ್ಷದ ಜವಬ್ದಾರಿಯೂ ಇದೆ. ಈಗಾಗಲೇ 40% ಪರ್ಸೆಂಟೇಜ್ ಬಗ್ಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನವರಿಗೂ ಗೊತ್ತು. ರಾಜಕಾರಣದ ಬಗ್ಗೆ ಗುತ್ತಿಗೆದಾರರ ಕುರಿತು ಎಲ್ಲರಿಗೂ ಗೊತ್ತು. ನಾಲ್ಕು ಕೋಟಿ ಕೆಲಸವನ್ನು ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡೋಕೆ ಬಿಟ್ಟವರಾರು ಎಂದು ಪ್ರಶ್ನಿಸಿದ್ದಾರೆ.
ಯಾರು ಇವರಿಗೆ ಪರ್ಮಿಷನ್ ಕೊಟ್ಟರು ಅನ್ನೋದರ ಬಗ್ಗೆ ತನಿಖೆಯಾಗಬೇಕು. ನಿನ್ನೆ ಉಡುಪಿಗೆ ಹೋದಾಗ ಇವರ ಜೊತೆಯಲ್ಲಿ ಇಬ್ಬರು ಸ್ನೇಹಿತರು ಹೋಗಿದ್ದರು. ಅವರು ಹೋಗಿದ್ದು ಮೇಲ್ನೋಟಕ್ಕೆ ಸಂಶಯಕ್ಕೆಡೆ ಮಾಡಿದೆ. ಈಶ್ವರಪ್ಪನವರು ಮೊದಲು ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಕಾಂಗ್ರೆಸ್ ನವರು ಮಲಗಿದ್ದವರು ಈಗ ಎದ್ದಿದ್ದಾರೆ. ಪ್ರಕರಣ ನಡೆದು ಅರ್ಧ ಮುಕ್ಕಾಲು ಗಂಟೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಕರೆ ನೀಡಿದೆ ಎಂದರೆ ಅನುಮಾನ ಬಾರದೇ ಇರುತ್ತದೆಯೇ ಎಂದು ಹೇಳಿದರು.
PublicNext
13/04/2022 07:22 pm