ಪಾಕಿಸ್ತಾನ್: ಮಾಜಿ ಕ್ರಿಕೆಟರ್ ಹಾಗೂ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರಾಜಕೀಯದಲ್ಲೂ ತಮ್ಮ ಅದೇ ಕ್ರೀಡಾ ಸ್ಪೂರ್ತಿಯನ್ನೇ ತೋರಿದ್ದಾರೆ. ಬಹುಮತವನ್ನ ಕಳೆದು ಕೊಂಡಿರೋ ಇಮ್ರಾನ್ ಖಾನ್, ಇನ್ನೂ ಒಂದು ಬಾಲ್ ಇದೆ. ಅಲ್ಲಿವರೆಗೂ ನಾನು ಪಾಕ್ ಪರವಾಗಿಯೇ ಹೋರಾಡುತ್ತೇನೆ ಎಂದು ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ.
ನಾಳೆ ಅವಿಶ್ವಾಸ ನಿರ್ಣಯದ ಮೇಲೆ ಮತ ಚಲಾಯಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿಯೇ ಇಮ್ರಾನ್ ಖಾನ್ ಇಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಒಂದು ಬಾಲ್ ಇದೆ ಅಂತಲೇ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ನಾಳೆ ಸಚಿವ ಸಂಪುಟ ಸಭೆ ಕರೆದಿದ್ದೇನೆ.ಸಂಜೆ ಹೊತ್ತಿಗೆ ದೇಶವನ್ನ ಉದ್ದೇಶಿಸಿ ಮಾತನಾಡಲಿದ್ದೇನೆ. ಕಟ್ಟ ಕಡೆಯ ಬಾಲ್ ಇರೋವರೆಗೂ ಪಾಕ್ ಪರವಾಗಿಯೇ ಹೋರಾಡುತ್ತೇನೆ ಎಂದು ಕೂಡ ಇಮ್ರಾನ್ ಖಾನ್ ಟ್ವಿಟರ್ ನಲ್ಲಿಯೇ ಬರೆದಿದ್ದಾರೆ.
PublicNext
08/04/2022 01:07 pm