ಬೆಂಗಳೂರು : ಪ್ರಾಯಶಃ ಆರಗ ಜ್ಞಾನೇಂದ್ರ ಅವರಂತಹ ಬೇಜವಾಬ್ದಾರಿ, ವಿವೇಚನಾರಹಿತ,ಸ್ಥಾನದ ಘನತೆ ಅರಿಯದ ಮತ್ತೊಬ್ಬಗೃಹ ಸಚಿವರನ್ನ ಕರ್ನಾಟಕ ರಾಜ್ಯ ಈ ಹಿಂದೆ ಯಾವತ್ತೂ ನೋಡಿರಲಿಕ್ಕಿಲ್ಲ. ಅವರು ಗೃಹಸಚಿವರಾಗಿ ಆರೇಳು ತಿಂಗಳಾದರೂ ಇನ್ನೂ ಕೂಡಾ ಅವರ ಇಲಾಖೆಯ ಬಗೆಗಿನ ರಾಜ್ಯನ ದಿನನಿತ್ಯದ ಆಗುಹೋಗುಗಳ ಬಗೆಗಿನ ಮಾಹಿತಿಯ ಅಜ್ಞಾನ ಅವರಿಂದ ದೂರವಾಗಿಲ್ಲ.
ಅವರು ಸಚಿವರಾದ ದಿನದಿಂದಲೂ ಅವರಿಗೆ ಗೃಹ ಇಲಾಖೆಗೆ ಸಂಬಂಧಿಸಿದ ಯಾವಮಾಹಿತಿಯೂ ಅವರಲ್ಲಿ ಲಭ್ಯ ಇರುವುದೇ ಇಲ್ಲಾ. ಅಪರೂಪಕ್ಕೊಮ್ಮೆ ಅವರು ಮಾಧ್ಯಮದವರಿಗೆ ಮಾಹಿತಿ ಕೊಟ್ಟರೂ ಅದು ಇವತ್ತು ಅವರು ಕೊಟ್ಟಂತಹ ಬೇಜವಾಬ್ದಾರಿ ಮಾಹಿತಿ ಆಗಿರುತ್ತದೆ. ನಿನ್ನೆ ಬೆಂಗಳೂರಿನ ಗೋರಿಪಾಳ್ಯದಲ್ಲಿ ಚಂದ್ರು ಅನ್ನುವ ಯುವಕನ ಹತ್ಯೆಯಾಗಿದೆ. ಆ ಹತ್ಯೆಯ ಹಿನ್ನಲೆಗೆ ಕಾರಣವಾಗಿದ್ದು Byke accident ಅನ್ನುವುದು ಪೊಲೀಸ್ ಇಲಾಖೆ ನೀಡಿದ ಮಾಹಿತಿ. ಆದರೆ ಮಾನ್ಯ ಗೃಹಸಚಿವರಿಗೆ ಮಾತ್ರ ಅದ್ಯಾರು ಮಾಹಿತಿಕೊಟ್ಟರೋ ಏನೋ ಗೊತ್ತಿಲ್ಲ ಇವತ್ತು ಬೆಳಿಗ್ಗೆ ಬಿಜೆಪಿ ಕಚೇರಿ ಬಳಿ ರಾಜಾರೋಷವಾಗಿ ಒಂದು ಹೇಳಿಕೆಯನ್ನು ಕೊಟ್ಟು ಬಿಟ್ಟಿದ್ದಾರೆ. ಆಹೇಳಿಕೆ ಈ ಪ್ರಕಾರ ಇತ್ತು.
ಅದೆಷ್ಟು ಕರಾರುವಕ್ಕಾಗಿ ಸ್ಪಷ್ಟವಾಗಿ ಆ ಮಾಹಿತಿಯನ್ನು ಸಾಹೇಬ್ರು ಕೊಟ್ಟು ಬಿಟ್ಟಿದ್ದರು ಅಂದ್ರೆ ಇನ್ನೇನು ಮತ್ತೆ ಕೋಮುಗಲಭೆ ಹೊತ್ತಿ ಉರಿಯಬೇಕು ಗಲಾಟೆ ಶುರುವಾಗಬೇಕು ಅನ್ನುವ ಹಾಗೆ ಇತ್ತು ಅವರ ಹೇಳಿಕೆ. ಬೆಂಗಳೂರಲ್ಲಿ ಕನ್ನಡ ಮಾತಾಡಿದ್ದಕ್ಕೆ ಗೋರಿ ಪಾಳ್ಯದಲ್ಲಿ ಹತ್ಯೆ ಆಯ್ತು ಅಂದ್ರೆ ಕೇಳಬೇಕಾ?? ಪುಣ್ಯಕ್ಕೆ ಅಷ್ಟರಲ್ಲೇ ಬೆಂಗಳೂರು ಪೊಲೀಸ್ ಕಮೀಷನರ್ ಅವರು ಹೇಳಿಕೆಯನ್ನು ಕೊಟ್ಟು ಇದು ಭಾಷೆಗಾಗಿ ಆದ ಗಲಾಟೆ ಅಲ್ಲ ಬದಲಿಗೆ ಬೈಕ್ accident ನಿಂದಾಗಿ ಆದ ಗಲಾಟೆ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ಅಷ್ಟರೊಳಗಾಗಿ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರೆಲ್ಲ ಇವರ ಜಾತಕ ಜಾಲಡಿಸಿ ಆಗಿತ್ತು.
ಅಷ್ಟರಲ್ಲಾಗಲೇ ಆರಗ ಜ್ಞಾನೇಂದ್ರ ಅವರಿಗೆ ಜ್ಞಾನೋದಯ ಆದಂತಿದೆ ತಕ್ಷಣಕ್ಕೇ ಮಾಧ್ಯಮದವರಿಗೆ ಮತ್ತೆ ಸ್ಪಷ್ಟನೆಕೊಟ್ಟ ಗೃಹ ಸಚಿವರು ನನಗೆ ಮಾಹಿತಿ ಕೊರತೆಯಿಂದ ಹಾಗೆ ಹೇಳಿದ್ದೆ. ಚಂದ್ರು ಹತ್ಯೆ ಆಗಿದ್ದು ಬೈಕ್ Accident ನಿಂದಾಗಿಯೇ ಹೊರತು ಭಾಷೆಯ ಕಾರಣಕ್ಕಾಗಿ ಅಲ್ಲ ಅಂತ ಸ್ಪಷ್ಟೀಕರಣ ನೀಡಿದ್ದಾರೆ.. ನಿಮಗೆ ಮಾಹಿತಿ ಕೊರತೆ ಇತ್ತಾ ಅಂತ ಕೇಳಿದ್ರೆ ಅವರ ಬಾಯಿಂದ ಬೆಬೆಬೆಬೆ.... ಎಂಬ ಉತ್ತರ..! ಗೃಹ ಸಚಿವರು ಇದು ಮೊದಲ ಸಲ ಹೀಗೆ ನಡೆದು ಕೊಂಡಿದ್ದಲ್ಲಾ ಪ್ರತೀಸಲವೂ ಅವರದ್ದು ಇದೇ ಗೋಳು. ಯಾವ ಮಾಹಿತಿ ಕೇಳಿದ್ರೂ ಅವರಲ್ಲಿ ಮಾಹಿತಿ ಅಲಭ್ಯ. ಅವರ ಸ್ವಂತ ಜಿಲ್ಲೆಯಾದ ಶಿವಮೊಗ್ಗದಲ್ಲಿ ಕಳೆದ ಎರಡು ತಿಂಗಳ ಹಿಂದೆ ನಡೆದ ಕೋಮುಗಲಭೆಯ ಸಂದರ್ಭದಲ್ಲೂ ಇದೇ ರೀತಿ ಬೇಜವಾಬ್ದಾರಿಯಿಂದ ನಡೆದುಕೊಂಡರು. ಕಳೆದ ಬಜೆಟ್ ಅಧಿವೇಶನದಲ್ಲೂ ಬೇಜವಾಬ್ದಾರಿ ಉತ್ತರ ಕೊಟ್ಟು ಪ್ರತಿಪಕ್ಷದವರು ಕ್ರಿಯಾಲೋಪ ಎತ್ತುವಂತೆ ಮಾಡಿದ್ದರು. ಒಟ್ಟಾರೆ ಆರಗಜ್ಞಾನೇಂದ್ರ ಅವರಿಗೆ ಗೃಹ ಇಲಾಖೆಯ ಗಾಂಭಿರ್ಯವೇ ಅರ್ಥವಾದಂತಿಲ್ಲ.ಅವರ ಈ ರೀತಿಯ ನಡಾವಳಿಯಿಂದ ಸರ್ಕಾರಕ್ಕೂ ಮತ್ತು ಅವರ ಪಕ್ಷಕ್ಕೂ ತೀವೃ ಮುಜುಗರವುಂಟಾಗುವಂತೆ ಆಗಿದೆ.
ಈ ಹಿಂದೆ ಅನೇಕ ಅಹಿತಕರ ಘಟನೆಗಳು ಸಂಭವಿಸಿವೆ. ಆಗ ಗೃಹ ಸಚಿವರಾಗಿದ್ದ ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಗೆ ನಿರ್ವಹಿಸಿದ್ದರು ಎಂಬುದನ್ನಾದರೂ ನೋಡಿ ಕಲಿಯಬೇಕು. ಇಲ್ಲವೆ ಬೊಮ್ಮಾಯಿ ಅವರಾದರೂ ಆರಗ ಅವರ ಜ್ಞಾನದ ಇಂದಿಯ ಎಚ್ಚರಗೊಳಿಸಬೇಕು ಇಲ್ಲವಾದರೆ ಮುಂದೊಂದು ದಿನ ಇದೇ ಪಕ್ಷಕ್ಕೆ ಮುಳುವಾಗಬಹುದು. .
ಪ್ರವೀಣ್ ರಾವ್ ಪೊಲಿಟಿಕಲ್ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
07/04/2022 09:49 pm