ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಮಧ್ಯೆ ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಗ್ರೀನ್ ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಸತ್ತನ್ನು ತಲುಪಿದರು. ಈ ವೇಳೆ ಮಾತನಾಡಿದ ಅವರು, ತೈಲ ಬೆಲೆ ಏರಿಕೆ ಕೇವಲ ಭಾರತ ಮಾತ್ರವಲ್ಲದೇ ಇಡೀ ವಿಶ್ವವನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ತೈಲಕ್ಕೆ ಪರ್ಯಾಯವಾಗಿ ನಾವು ಗ್ರೀನ್ ಹೈಡ್ರೋಜನ್ ಬಳಕೆಯನ್ನು ಆರಂಭಿಸಬೇಕಿದ ಎಂದು ಹೇಳಿದರು.
ಗ್ರೀನ್ ಹೈಡ್ರೋಜನ್ ಬಳಕೆಯಿಂದಾಗಿ ಕಚ್ಚಾತೈಲ ಆಮದು ಪ್ರಮಾಣ ಕೂಡ ಇಳಿಕೆಯಾಗಲಿದ್ದು, ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಇದು ಅನುಕೂಲವಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಬಹು ನಿರೀಕ್ಷಿತ ಆತ್ಮನಿರ್ಭರ ಭಾರತ ಯೋಜನೆಯನ್ನು ಸಾಧಿಸುವ ನಿಟ್ಟಿನಲ್ಲಿ ಹೈಡ್ರೋಜನ್ ಕಾರುಗಳನ್ನು ದೇಶದಲ್ಲಿಯೇ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ನಿತಿನ ಗಡ್ಕರಿ ತಿಳಿಸಿದ್ದಾರೆ. ಇದು ನೀರಿನಿಂದ ತಯಾರಿಸಿದ ಗ್ರೀನ್ ಹೈಡ್ರೋಜನ್ನಿಂದ ಓಡುವ ಈ ಕಾರುಗಳು ಸ್ವಾವಲಂಬಿ ಭಾರತದ ಮುಂದಿನ ಹೆಜ್ಜೆ ಗುರುತುಗಳಾಗಲಿವೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
PublicNext
30/03/2022 06:28 pm