ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕ್ ಪ್ರಧಾನಿಗೆ ಎ.3ರಂದು ವಿಶ್ವಾಸ ಮತದಾನ: ಇಮ್ರಾನ್ ಖಾನ್‌ಗೆ ಮತ್ತಷ್ಟು ತಳಮಳ

ಇಸ್ಲಾಮಾಬಾದ್: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಈಗಾಗಲೇ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಹೀಗಾಗಿ ಅಧಿಕಾರಿ ಉಳಿಸಿಕೊಳ್ಳುವಲ್ಲಿ ಇಮ್ರಾನ್ ಖಾನ್ ಎಲ್ಲಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಈ ನಡುವೆ ಅವಿಶ್ವಾಸ ನಿರ್ಣಯದ ಮೇಲಿನ ಮತದಾನ ಏಪ್ರಿಲ್‌ 3 ರಂದು ನಡೆಯಲಿದೆ ಎಂದು ಆಂತರಿಕ ಸಚಿವ ಶೇಖ್‌ ರಶೀದ್‌ ಮಂಗಳವಾರ ತಿಳಿಸಿದರು.

ಅಧಿಕಾರ ಉಳಿಸಿಕೊಳ್ಳುವ ತಳಮಳದಲ್ಲಿರುವ ಪಾಕ್ ಪ್ರಧಾನಿ ಸುಮಾರು 50ಕ್ಕೂ ಹೆಚ್ಚು ಸಚಿವರನ್ನು ಅಜ್ಞಾತ ಸ್ಥಳದಲ್ಲಿ ಇಟ್ಟಿದ್ದಾರೆ ಎಂಬ ಮಾಹಿತಿ ಇದೆ. ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶೇಖ್‌ ರಶೀದ್‌, ಮಾರ್ಚ್‌ 31ರ ಕಲಾಪದಲ್ಲಿ ಅವಿಶ್ವಾಸ ನಿರ್ಣಯ ಬಗ್ಗೆ ಚರ್ಚೆ ನಡೆಯಲಿದೆ. ಬಳಿಕ ಏಪ್ರಿಲ್‌ 3ರಂದು ಮತದಾನ ನಡೆಯಲಿದೆ. ಇದರಲ್ಲಿ ಇಮ್ರಾನ್‌ ಖಾನ್‌ ಜಯ ಗಳಿಸಲಿದ್ದಾರೆ ಎಂಬ ವಿಶ್ವಾಸ ಇದೆ. ಮಿತ್ರ ಪಕ್ಷಗಳ ಸದಸ್ಯರು ನಮ್ಮನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದ್ದಾರೆ. ಸದ್ಯ ಇಮ್ರಾನ್ ಖಾನ್ ಅವರನ್ನು ಸೋಲಿಸಲು ವಿಪಕ್ಷಗಳು ಟೊಂಕ ಕಟ್ಟಿ ನಿಂತಿವೆ.

Edited By : Nagaraj Tulugeri
PublicNext

PublicNext

29/03/2022 10:20 pm

Cinque Terre

57.47 K

Cinque Terre

6

ಸಂಬಂಧಿತ ಸುದ್ದಿ