ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ಯಾಂಡ್‌ ಬಾಜಾದೊಂದಿಗೆ ಮಗಳನ್ನು ಅದ್ದೂರಿಯಾಗಿ ಶಾಲೆಗೆ ಕಳುಹಿಸಿದ ತೆಲಂಗಾಣದ ಮಾಜಿ ಶಾಸಕ

ಹೈದರಾಬಾದ್‌: ತೆಲಂಗಾಣದ ಖೈತರಾಬಾದ್‌ನ ಮಾಜಿ ಶಾಸಕ ವಿಷ್ಣುವರ್ದನ್ ರೆಡ್ಡಿ ಅವರು ಬ್ಯಾಂಡ್‌ ಬಾಜಾ ಮೊಳಗಿಸಿ ತಮ್ಮ ಪುತ್ರಿ ಜನಶ್ರೀ ರೆಡ್ಡಿಯನ್ನು ಶಾಲೆಗೆ ಕಳುಹಿಸಿಕೊಟ್ಟಿದ್ದಾರೆ.

ನಗರದ ಚಿರೆಕ್‌ ಇಂಟರ್‌ನ್ಯಾಶ‌ನಲ್‌ ಶಾಲೆಯ ವಿದ್ಯಾರ್ಥಿನಿಯಾದ ಜನಶ್ರೀ ಕೊರೊನಾ ಸಾಂಕ್ರಾಮಿಕ ತಡೆ ನಿಯಮಗಳಿಂದಾಗಿ ಸತತವಾಗಿ ಮೂರು ವರ್ಷ ಮನೆಯಲ್ಲೇ ಆನ್‌ಲೈನ್‌ ಕ್ಲಾಸ್‌ನಲ್ಲಿ ಪಡೆದಿದ್ದರು. ಈ ಮೂಲಕ 5, 6 ಮತ್ತು 7ನೇ ತರಗತಿ ತೇರ್ಗಡೆಯಾಗಿದ್ದಾಳೆ. ಈಗ ಶಾಲೆ ಪುನರಾರಂಭವಾಗಿರುವ ಹಿನ್ನೆಲೆಯಲ್ಲಿ ಆಕೆ ಮೂರು ವರ್ಷಗಳ ಅನಂತರ ಮೊದಲ ಬಾರಿಗೆ ಶಾಲೆಗೆ ಹೊರಟಿದ್ದರಿಂದ ಆಕೆಯನ್ನು ಅದ್ದೂರಿಯಾಗಿ ಕಳುಹಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Edited By : Vijay Kumar
PublicNext

PublicNext

23/03/2022 03:39 pm

Cinque Terre

51.66 K

Cinque Terre

5

ಸಂಬಂಧಿತ ಸುದ್ದಿ