ಬೆಂಗಳೂರು : ಬಾಲಕಿ ಅಕ್ಷಯಾ ಸಾವು ಸಾವಲ್ಲ, ಅದು ಸರ್ಕಾರಿ ಹತ್ಯೆ ಎನ್ನಬಹುದು. ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.
ಬೆಂಗಳೂರಿನಲ್ಲಿಂದು ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಹದಿನಾಲ್ಕು ವರ್ಷದ ಬಾಲಕಿ ಬಲಿಯಾಗಿದ್ದಾಳೆ. ಸಣ್ಣ ಮಳೆಗೆ ಪಾದಚಾರಿ ಮಾರ್ಗದಲ್ಲಿ ನೀರು ನಿಂತ ಪರಿಣಾಮ ಶಾಲಾ ವಿದ್ಯಾರ್ಥಿಗಳು ರಸ್ತೆಯ ಡಿವೈಡರ್ ಕ್ರಾಸ್ ಮಾಡಿ ರಸ್ತೆ ದಾಟುವಾಗ ಕಸದ ಲಾರಿಗೆ ಸಿಲುಕಿ ಬಾಲಕಿ ಅಕ್ಷಯಾ ಮೃತ ಪಟ್ಟಿದ್ದಾಳೆ.
ಇದೇ ವಿಚಾರವಾಗಿ ಗರಂ ಆದ ಕಾಂಗ್ರೆಸ್ ಬಾಲಕಿ ಅಕ್ಷಯಾ ಸಾವು ಸಾವಲ್ಲ, ಅದು ಸರ್ಕಾರಿ ಹತ್ಯೆ ಎನ್ನಬಹುದು. ಬಿಬಿಎಂಪಿಯ ಅವ್ಯವಸ್ಥೆಗಳಿಗೆ ಹೈಕೋರ್ಟ್ ಹಲವಾರು ಬಾರಿ ಕಪಾಳಮೋಕ್ಷ ಮಾಡಿದ್ದರೂ ಸರ್ಕಾರ ಎಚ್ಚರಾಗದೆ ಕುಳಿತಿದೆ. ಬಿಬಿಎಂಪಿ ಚುನಾವಣೆ ನಡೆಸದೆ, ಅಧಿಕಾರಿಗಳನ್ನು ಅಕ್ರಮ ನಡೆಸಲು ಬಿಟ್ಟಿರುವ ಭ್ರಷ್ಟ ಮತ್ತು ಬೇಜವಾಬ್ದಾರಿ ಬಿಜೆಪಿ ಸರ್ಕಾರವೇ ಮುಗ್ದ ಬಾಲಕಿಯನ್ನು ಹತ್ಯೆ ಮಾಡಿದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ರ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.
PublicNext
21/03/2022 09:06 pm