ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ಪಕ್ಷ ಮುಳುಗಿಸಲು ಜಿ-23 ಸಂಚು ಮಾಡಿದೆ: ಮಲ್ಲಿಕಾರ್ಜುನ ಖರ್ಗೆ ಆರೋಪ

ನವದೆಹಲಿ: ಕಾಂಗ್ರೆಸ್ ನಾಯಕತ್ವದ ವಿರುದ್ಧ ತಿರುಗಿ ಬಿದ್ದಿರುವ ಅದೇ ಪಕ್ಷದ ನಾಯಕರೇ ಇರುವ ಜಿ-23 ವಿರುದ್ಧ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನಿತರಾಗಿದ್ದಾರೆ. ಸೋನಿಯಾ ನಾಯಕತ್ವದ ಬಗ್ಗೆ ಭಿನ್ನಮತ ಇರುವ ನಮ್ಮವತರೇ ಕಾಂಗ್ರೆಸ್ಸನ್ನು ಒಡೆಯಲು ಮುಂದಾಗಿದ್ದಾರೆ. ಆದರೆ ಜಿ-23 ಸದಸ್ಯರು ಒಂದಲ್ಲ ನೂರು ಸಭೆ ನಡೆಸಿದರೂ ಕಾಂಗ್ರೆಸ್ ನಾಯಕತ್ವ ಹಾಗೂ ಒಗ್ಗಟ್ಟು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ಬುಧವಾರ ಸಂಜೆ, ಜಿ-23 ಗುಂಪಿನ ಸದಸ್ಯರು ಈ ಗುಂಪಿನ ಪ್ರಮುಖ ಸದಸ್ಯರಾದ, ಕೇಂದ್ರದ ಮಾಜಿ ಸಚಿವ ಕಪಿಲ್‌ ಸಿಬಲ್‌ ನಿವಾಸದಲ್ಲಿ ಸಭೆ ಸೇರಲಿದ್ದಾರೆಂಬ ಮಾಹಿತಿಯ ಬಗ್ಗೆ ಖರ್ಗೆ ಪ್ರತಿಕ್ರಿಯಿಸಿದ ಖರ್ಗೆ “ಇತ್ತೀಚೆಗೆ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿಯಲ್ಲೇ ನಾಯಕತ್ವದ ಬಗ್ಗೆ ಇರುವ ಎಲ್ಲಾ ಗೊಂದಲಗಳನ್ನು ಚರ್ಚಿಸಲಾಗಿದೆ. ಅವರು ಎಷ್ಟಾದರೂ ಸಭೆಗಳನ್ನು ಮಾಡಿಕೊಳ್ಳಲಿ ಎಂದಿದ್ದಾರೆ. 'ಪಕ್ಷದಿಂದ ಎಲ್ಲವನ್ನೂ ಪಡೆದ ನಂತರ ಪಕ್ಷದ ವಿರುದ್ಧ ಹೀಗೆ ತಿರುಗಿಬೀಳುವುದು ಸರಿಯಲ್ಲ. ಗಾಂಧಿ ಕುಟುಂಬವು ಪಕ್ಷದ ಅವಿಭಾಜ್ಯ ಅಂಗ. ಪಕ್ಷ ಎದುರಿಸುತ್ತಿರುವ ಈಗಿನ ಕಠಿಣ ಸಂದರ್ಭದಲ್ಲಿ ಗಾಂಧಿಯವರಿಗೆ ನಾಯಕತ್ವ ಕೊಡುವುದಕ್ಕಿಂತ ಮತ್ತೊಂದು ಉತ್ತಮ ಆಯ್ಕೆಯಿಲ್ಲ” ಎಂದು ಖರ್ಗೆ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

17/03/2022 10:52 am

Cinque Terre

57.75 K

Cinque Terre

11

ಸಂಬಂಧಿತ ಸುದ್ದಿ