ಬೆಂಗಳೂರು: ರಾಜ್ಯದ ಮಹಿಳೆಯರಿಗೆ ಉದ್ಯಮ ಕ್ಷೇತ್ರದಲ್ಲೂ ಉತ್ತೇಜನ ನೀಡುವುದು ಅಗತ್ಯ ಇದೆ ಎಂದು ವೈದ್ಯಕೀಯ ಸಚಿವ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಎಫ್ಕೆಸಿಸಿ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚಾರಣೆಯಲ್ಲಿ ಸಚಿವರು ಮಾತನಾಡಿದರು. ಒಂದು ಸಮಾಜ ಅಭಿವೃದ್ದಿ ಕಾಣಬೇಕಿದ್ದರೇ ಮಹಿಳೆಯರಿಗೆ ಮಹತ್ವ ಕೊಡಬೇಕು. ಅವರಿಗೂ ಸಮಾನವಾದ ಹಕ್ಕನ್ನ ಕೊಡಲೇಬೇಕು ಎಂದು ಸುಧಾಕರ್ ತಿಳಿಸಿದ್ದಾರೆ.
ಬಾಲ್ಯದಿಂದಲೇ ಮಹಿಳೆಯ ಹೋರಾಟ ಶುರು ಆಗಿಬಿಟ್ಟಿರುತ್ತದೆ. ಲಿಂಗ ಸಮಾನತೆ ಹೋರಾಟ, ಕುಟುಂಬದಲ್ಲೂ ಹಕ್ಕಿಗಾಗಿಯೇ ಹೋರಾಟ. ಹೀಗೆ ಹೋರಾಟ ನಿರಂತರವಾಗಿಯೇ ಇರುತ್ತದೆ ಅಂತಲೇ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
PublicNext
15/03/2022 08:47 pm