ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೈಕೋರ್ಟ್ ತೀರ್ಪಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ: ಯು.ಟಿ ಖಾದರ್

ಬೆಂಗಳೂರು: ಹಿಜಾಬ್ ಕುರಿತಾಗಿ ಇಂದು ಪ್ರಕಟವಾದ ತೀರ್ಪಿನ ಕುರಿತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಜಾಬ್ ಇಸ್ಲಾಂ ಧರ್ಮದಲ್ಲಿ ಅತ್ಯಗತ್ಯ ಆಚರಣೆ ಅಲ್ಲ ಎಂಬ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ. ಆದ್ರೆ ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ, ಸಂಬಂಧಪಟ್ಟವರು ಸಲ್ಲಿಸಬಹುದು. ಸಿಡಿಸಿ ತೀರ್ಮಾನದಂತೆ ಸಮವಸ್ತ್ರ ನಿರ್ಧಾರ ಆಗುತ್ತೆ, ಸಿಡಿಸಿ ತೀರ್ಮಾನ ಇಲ್ಲದ ಕಡೆ ಸಮವಸ್ತ್ರ ಇಲ್ಲದಿರಬಹುದು. ಹಿಜಾಬ್, ಇಸ್ಲಾಂ ಆಚರಣೆ ಅಲ್ಲ, ಎನ್ನುವ ಕೋರ್ಟ್ ತೀರ್ಪಿಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

15/03/2022 12:45 pm

Cinque Terre

69.63 K

Cinque Terre

4

ಸಂಬಂಧಿತ ಸುದ್ದಿ