ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ಸ್ ನಾಯಕರೆ ಪಂಜಾಬ್ ಫಲಿತಾಂಶದಿಂದಾದರೂ ಪಾಠ ಕಲಿಯುವಿರಾ?

ವಿಶೇಷ ಸಂಪಾದಕೀಯ : ಕೇಶವ ನಾಡಕರ್ಣಿ

ಸಾರ್ವತ್ರಿಕ ಚುನಾವಣೆ ಮಟ್ಟದಲ್ಲಿಯೆ ದೇಶದ ಗಮನ ಸೆಳೆದಿದ್ದ ಐದು ರಾಜ್ಯಗಳ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಆಘಾತ ನೀಡಿದೆ. "ನಿನ್ನಿಂದಾಗದು ಪಕ್ಕಕ್ಕೆ ಸರಿ '' ಎಂದು ತಮ್ಮ ರಾಹುಲ್ ಗಾಂಧಿಯನ್ನು ದೂರವಿಟ್ಟು ಉತ್ತರ ಪ್ರದೇಶ ಚುನಾವಣೆ ಕಾಂಗ್ರೆಸ್ ಸಾರಥ್ಯ ವಹಿಸಿದ್ದ ಪ್ರಿಯಾಂಕಾ ಗಾಂಧಿ ವಾಡ್ರಾ, ಇದ್ದ ಏಳು ಸೀಟುಗಳಲ್ಲಿ ಐದನ್ನು ಕಳೆದುಕೊಂಡು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಇದರಿಂದ ಪತಿ ರಾಬರ್ಟ್ ವಾಡ್ರಾರನ್ನು ರಾಜಕೀಯಕ್ಕೆ ತರಬೇಕೆಂಬ ಆಸೆಗೂ ತಣ್ಣಿರೆರಚಿದಂತಾಗಿದೆ.

ಅದು ಬಿಡಿ, ಗೋವಾದಲ್ಲಿ ಬಹುಮತ ಪಡೆದು ಇನ್ನೇನು ಪ್ರಮಾಣ ವಚನ ಸ್ವೀಕರಿಸುವುದೊಂದೆ ಬಾಕಿ ಎಂಬ ಕಾಂಗ್ರೆಸ್ಸಿನ ಲೆಕ್ಕಾಚಾರ ಬುಡಮೇಲಾಗಿದೆ. ಇವರ ತಯಾರಿ ಎಷ್ಟಿತ್ತೆಂದರೆ ಮತ ಎಣಿಕೆ ಆರಂಭಕ್ಕೆ ಮುನ್ನವೇ ಗೋವಾ ಕಾಂಗ್ರೆಸ್ ನಾಯಕರು ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದರಂತೆ.

ಅಂದರೆ, ಕಾಂಗ್ರೆಸ್ ಬಹುತೇಕ ಅಧಿಕಾರಕ್ಕೆ ಬರುವುದು ಖಚಿತ ತಮಗೆ ಬಹುತ ಸಾಬೀತುಪಡಿಸಲು ಮೊದಲ ಅವಕಾಶ ನೀಡಬೇಕೆಂದು ರಾಜ್ಯಪಾಲರನ್ನು ಕೋರಲು ಸಿದ್ದವಾಗಿತ್ತಂಬ ಸುದ್ದಿ ಹರಿದಾಡ ತೊಡಗಿವೆ.

ಇಷ್ಟು ಮಾತ್ರವಲ್ಲ, ಶತಾಯಗತಾಯ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳಲೇ ಬೇಕೆಂದು ಪಣತೊಟ್ಟಿದ ಹೈಕಮಾಂಡ್ ಟ್ರಬಲ್ ಶೂಟರ್, ರೆಸಾರ್ಟ್ ರಾಜಕಾರಣ ಸ್ಪೇಶಲಿಸ್ಟ್ ಡಿ.ಕೆ ಶಿವಕುಮಾರ್ ಅವರನ್ನು ರಾತ್ರೋರಾತ್ರಿ ಗೋವಾಕ್ಕೆ ರವಾನಿಸಿತ್ತು. ಆದರೆ ಎಲ್ಲವೂ ಠುಸ್.

ಸುಮಾರು ಏಳು ದಶಕಗಳ ಕಾಲ ಕಾಂಗ್ರೆಸ್ ಅಥವಾ ಶಿರೋಮಣಿ ಅಕಾಲಿದಳ + ಬಿಜೆಪಿ ಪಂಜಾಬ್ ಆಳಿದ ದಾಖಲೆ ಇದೆ. ಆದರೆ ಈ ಬಾರಿ ಹೊಸತನ ಹಾಗೂ ಬದಲಾವಣೆ ಬಯಸಿದ್ದ ಪಂಜಾಬಿಗರು ಆಮ್ ಆದ್ಮಿಗೆ ಜೈ ಎಂದಿದ್ದಾರೆ. 91 ಸೀಟ್ ಗೆದ್ದು ಎಲ್ಲ ಪಕ್ಷಗಳನ್ನು ಗೂಡಿಸಿ ಹಾಕಿದೆ. ಝಾಡು ಪಾರ್ಟಿ ಖಲಿಸ್ತಾನ ಉಗ್ರ ಸಂಘಟನೆ ಬಗ್ಗೆ ಮೃದು ಧೋರಣೆ ಹೊಂದಿದೆ ಎಂಬ ಆರೋಪಗಳ ನಡುವೆಯೂ ಭಾರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದ್ದು ಒಂದು ಇತಿಹಾಸವೇ.

ಈ ಐದು ರಾಜ್ಯಗಳ ಚುನಾವಣೆ 2023 ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು?

ಈ ಚುನಾವಣಾ ಫಲಿತಾಂಶಗಳು ರಾಜ್ಯ ಬಿಜೆಪಿಗರಲ್ಲಿ ಉತ್ಸಾಹ ಮೂಡಿರ ಬಹುದು ಆದರೆ ತಿಳಿದುಕೊಂಡಷ್ಟು ಸುಲಭವಲ್ಲ. ಹಾಗೆಯೇ ಪಂಜಾಬ್ ದಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು ಇಲ್ಲಿಯೂ ಪುನರಾವರ್ತನೆಯಾಗುವ ಸಾಧ್ಯತೆಗಳಿವೆ.

ಚುನಾವಣೆ ಕೆಲವೇ ತಿಂಗಳು ಇರುವಾಗ ಕ್ಯಾಪ್ಟನ್ ಅಮರೀಂದ್ರ ಸಿಂಗ್ ರಿಂದ ಸಿಎಂ ಕುರ್ಚಿ ಕಿತ್ತುಕೊಂಡು ಚರಣಜಿತ್ ಸಿಂಗ್ ಚನ್ನಿ ಅವರಿಗೆ ಕೊಡಲಾಯಿತು. ಎಣ್ಣೆ ಸೀಗೆಕಾಯಿಯಂತಿದ್ದ ಚನ್ನಿ ಹಾಗೂ ನವಜೋತ್ ಸಿಂಗ್ ಸಿದ್ದು ಕೊನೆವರೆಗೂ ಕಿತ್ತಾಡಿಕೊಂಡೆ ಹೋದರು. ಅದರ ಪರಿಣಾಮ ಭಾರಿ ಸೋಲು. ಇದನ್ನು ನೋಡಿದಾಗ ರಾಜ್ಯ ಕಾಂಗ್ರೆಸ್ ಪರಿಸ್ಥಿತಿಯೂ ಭಿನ್ನವಾಗಿಲ್ಲ.

ಕರ್ನಾಟಕದಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿ ಸ್ಥಾನಕ್ಕಾಗಿ ತಿಕ್ಕಾಟ ನಡೆದಿದೆ. ಇದಕ್ಕೆ ಪುಷ್ಠಿ ಎಂಬಂತೆ ಅವರವರ ಬೆಂಬಲಿಗರು ಅವಕಾಶ ಸಿಕ್ಕಾಗಲೆಲ್ಲ ಜೈಕಾರ ಹಾಕುತ್ತಲೇ ಇದ್ದಾರೆ.

ಪಂಜಾಬ್ ದಲ್ಲಿ ಚರಣಜಿತ್ ಸಿಂಗ್ ಚನ್ನಿ ಹಾಗೂ ನವಜೋತ್ ಸಿಂಗ್ ಸಿದ್ದು ಪಾತ್ರವನ್ನು ಸಧ್ಯ ಕರ್ನಾಟಕ ಕಾಂಗ್ರೆಸ್ ದಲ್ಲಿ ಸಿದ್ದು ಹಾಗೂ ಶಿವಕುಮಾರ್ ವಹಿಸುತ್ತಿದ್ದಾರೆ ಎಂದೆ ವಿಶ್ಲೇಷಿಸಲಾಗುತ್ತಿದೆ. ಅದು ನಿಜವೇ ಆದಲ್ಲಿ ಕಾಂಗ್ರೆಸ್ಸನ್ನು ಯಾರಿಂದಲೂ ಕಾಪಾಡಲು ಸಾಧ್ಯವಿಲ್ಲ.

ಈಗಲೇ ಪ್ರತಿ ಕ್ಷೇತ್ರದಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಬಣ , ನಾನು ಡಿಕೆಸಿ ಬಣ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಎಲ್ಲ ಭಿನ್ನಾಭಿಪ್ರಾಯ ಮರೆತು ಸಂಘಟನಾತ್ಮಕವಾಗಿ ಬಿಜೆಪಿ ಎದುರಿಸಿದರೆ ಮಾತ್ರ ಗೆಲುವು ಸಾಧಿಸಬಹುದು. ಇಲ್ಲವಾದರೆ ಇದೂ ಸಹ ಮತ್ತೊಂದು ಪಂಜಾಬ್ ಫಲಿತಾಂಶ ಆಗಬಹುದು.

ಪ್ರಚಾರ ಸಮಯದಲ್ಲೂ ಇತರೆ ಪಕ್ಷಗಳ ನಾಯಕರ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು. ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿ ಬಗ್ಗೆ " ಮೌಥ ಕಾ ಸೌದಾಗರ್ '' ಎಂದು ಕಟುವಾಗಿ ಮಾತನಾಡಿದ್ದರೆ ಗುಜರಾತ್ ಚುನಾವಣೆಯಲ್ಲಿ ಮಣಿಶಂಕರ್ ಅಯ್ಯರ್ " ನೀಚ್ '' ಪದ ಬಳಸಿದ್ದರು. ಕಾಂಗ್ರೆಸ್ಸಿರ ಈ ಪದಗಳೆ ಅವನತಿಗೆ ಕಾರಣವಾದವು. .

ಯುಪಿ ಪ್ರಚಾರ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಯೋಗಿ ಆದಿತ್ಯನಾಥ ಅವರನ್ನು" ಬುಲ್ದೋಜರ್ ಬಾಬಾ '' ಎಂದು ಕರೆದು ಅದೇ ಬುಲ್ದೋಜರ್ ದಿಂದ ಇಕ್ಕಿಸಿಕೊಂಡಿದ್ದು ತಾಜಾ ಉದಾಹರಣೆ.

Edited By :
PublicNext

PublicNext

10/03/2022 04:22 pm

Cinque Terre

52.48 K

Cinque Terre

26

ಸಂಬಂಧಿತ ಸುದ್ದಿ