ಪಣಜಿ: ಗೋವಾದ ಸಾಂಕ್ವೇಲಿಮ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್‌ಗೆ ಹಿನ್ನಡೆ ಉಂಟಾಗಿದೆ.
ಪಣಜಿಯಲ್ಲಿ ಬಿಜೆಪಿಯ ಅತಾನಾಸಿಯೋ ಮೊನ್ರ‍್ರೇಟ್ ಮುನ್ನಡೆಯಲ್ಲಿದ್ದರೆ, ಪಕ್ಷೇತರ ಉತ್ಪಾಲ್ ಪರೀಕರ್, ಕಾಂಗ್ರೆಸ್‌ನ ಎಲ್ವಿಸ್ ಗೋಮ್ಸ್, ಎಎಪಿಯ ವಾಲ್ಮೀಕಿ ನಾಯ್ಕ್‌ಗೆ ಹಿನ್ನಡೆಯಾಗಿದೆ. ವಾಲ್ಪೋಯಿಯಲ್ಲಿ ಬಿಜೆಪಿಯ ವಿಶ್ವಜಿತ್ ರಾಣೆಗೆ ಮುನ್ನಡೆ ಉಂಟಾದರೆ ತುಕಾರಾಮ್ ಪರಬ್‌ಗೆ ಹಿನ್ನಡೆ ಉಂಟಾಗಿದೆ. ಮಾಂಡ್ರೆಮ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಮಾಜಿ ಸಿಎಂ ಲಕ್ಷ್ಮೀಕಾಂತ್ ಪರ್ಸೇಕರ್ ಮುನ್ನಡೆಯಲ್ಲಿದ್ದರೆ, ಬಿಜೆಪಿಯ ದಯಾನಂದ ಸೋಪ್ಟೆಗೆ ಹಿನ್ನಡೆ ಉಂಟಾಗಿದೆ. ಮಾಪುಸಾ ಕಾಂಗ್ರೆಸ್‌ನ ಸುಧೀರ್ ಕಂಡೋಲ್ಕರ್‌ಗೆ ಹಿನ್ನಡೆ ಉಂಟಾಗಿದೆ. ಸಿಯೋಲಿಮ್‌ನಲ್ಲಿ ಬಿಜೆಪಿಯ ದಯಾನಂದ ಮಾಂಡ್ರೇಕರ್ ಮುನ್ನಡೆ ಸಾಧಿಸುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ದೆಲಿಲಾಹ್ ಲೋಬೋಗೆ ಹಿನ್ನಡೆಯಾಗಿದೆ.
PublicNext
10/03/2022 09:38 am