ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದ ಮೇಕೆದಾಟು ಪಾದಯಾತ್ರೆಯನ್ನ ಬಿಜೆಪಿ ಕಟುವಾಗಿಯೇ ಟೀಕಿಸಿದೆ. ಇದು ಮೇಕೆದಾಟು ಪಾದಯಾತ್ರೆ ಅಲ್ಲ. ಸುಳ್ಳಿನ ಜಾತ್ರೆ. ಇಲ್ಲಿಗೆ ಬಂದವರಿಗೆ ಹಣದ ಆಮಿಷ, ಇದು ಬಂಡೆ ಮತ್ತು ಮಂಡೆ ಒಡೆದ ಹಣವಲ್ಲದೇ ಮತ್ತಿನ್ನೇನು ಅಂತಲೇ ಪ್ರಶ್ನೆ ಮಾಡಿದೆ.
ಅಡಿಗಡಿಗೊಂದು ತಂಪಾದ ಜ್ಯೂಸ್, ಐಸ್ ಕ್ರೀಮ್, ಎಳನೀರು, ಹಣ್ಣುಗಳು, ಬಾದಾಮಿ ಹಾಲು, ಮಜ್ಜಿಗೆ, ಇದು ಜಾತ್ರೆಯಲ್ಲ, ಇದು ಮೇಕೆದಾಟು ಪಾದಯಾತ್ರೆ!
#ಸುಳ್ಳಿನಜಾತ್ರೆ ಗೆ ಬಂದವರಿಗೆಲ್ಲ ಹಣದ ಆಮಿಷ, ಇದು ಬಂಡೆ & ಮಂಡೆ ಒಡೆದ ಹಣವಲ್ಲದೆ ಮತ್ತೇನು?
ವಿಶೇಷವಾಗಿ, ಮೇಕೆದಾಟು - ಎಣ್ಣೆ ಘಾಟು!!!
ಕಾಂಗ್ರೆಸ್ ಪಕ್ಷದ ಪಾದಯಾತ್ರೆ ಇನ್ನು ಮೂರು ದಿನ ಇರುತ್ತದೆ. ಸಾರ್ವಜನಿಕರು ಟ್ರಾಫಿಕ್ ಜಾಮ್ ಸಹಿಸಿಕೊಳ್ಳಲೇಬೇಕು ಅಂತಲೆ ಹೇಳಿಕೆ ಕೊಟ್ಟಿದ್ದರು. ಅದನ್ನೂ ಟೀಕಿಸಿರೋ ಬಿಜೆಪಿ, ಒಂದು ನಿಮಿಷದ ಸಂಚಾರ ಅಸ್ತವ್ಯಸ್ತವನ್ನೇ ಸಹಿಸಿಕೊಳ್ಳಲು ಅಸಾಧ್ಯವಾಗುತ್ತದೆ. ಮೂರು ದಿನಗಳ ಟ್ರಾಫಿಕ್ ಜಾಮ್ ನಿಂದ ಏನೆಲ್ಲ ಆಗುತ್ತದೆ ಅನ್ನೋ ಅರಿವು ಡಿಕೆಶಿಗೆ ಇದಿಯೇ ಅಂತಲೇ ಪ್ರಶ್ನಿಸಿದೆ ಬಿಜೆಪಿ.
PublicNext
02/03/2022 08:53 pm