ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಂಧಿಯನ್ನ ಕೊಂದವರೇ ಮೀರತ್‌ ನಲ್ಲಿ ನನ್ನ ಮೇಲೆ ದಾಳಿ ಮಾಡಿದ್ದಾರೆ: ಓವೈಸಿ

ಉತ್ತರ ಪ್ರದೇಶ:ಗಾಂಧಿಯನ್ನ ಕೊಂದವರೇ ಮೀರತ್ ನಲ್ಲಿ ನನ್ನ ಮೇಲೆ ದಾಳಿ ಮಾಡಿದ್ದಾರೆ. ಅಲ್ಲಾ ನನ್ನ ಉಳಿಸಲೇಬೇಕು ಅಂತ ನಿರ್ಧರಿಸಿದ್ದ. ಹಾಗಾಗಿಯೇ ನನಗೆ ಏನೂ ಆಗಿಯೇ ಇಲ್ಲ ಎಂದು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಹಿರಂಗವಾಗಿಯೇ ಹೇಳಿ ಬಿಟ್ಟಿದ್ದಾರೆ.

ಹಲ್ಲೆ ಆದ ಬಳಿಕ ಓವೈಸಿ ಇದೇ ಮೊದಲ ಬಾರಿ ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ಛಪ್ರೌಲಿ ಪಟ್ಟದಲ್ಲಿ ನಡೆದ Rally ಯಲ್ಲಿ ಭಾಗವಹಿಸಿ ಸಾರ್ವಜನಿಕರನ್ನ ಉದ್ದೇಶಿಯೇ ಹೀಗೆ ಮಾತನಾಡಿದ್ದಾರೆ.

ಫೆಬ್ರವರಿ 3 ರಂದು ಮೀರತ್‌ನಲ್ಲಿ ಓವೈಸಿ ಕಾರ್ ಮೇಲೆ ದಾಳಿ ನಡೆದಿತ್ತು. ನಾಲ್ಕು ಗುಂಡು ಗಳನ್ನ ಕೂಡ ಹಾರಿಸಲಾಗಿತ್ತು. ಈ ಸಂಬಂಧ ಬಂಧಿಸಿದ್ದ ಇಬ್ಬರು ಆರೋಪಿಗಳು ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಹಾಗಾಗಿಯೇ ಈಗ ಓವೈಸಿ ಮಾತು ಮತ್ತಷ್ಟು ಪ್ರಮುಖ ಎನಿಸುತ್ತಿದೆ.

Edited By :
PublicNext

PublicNext

05/02/2022 10:13 pm

Cinque Terre

92.87 K

Cinque Terre

56

ಸಂಬಂಧಿತ ಸುದ್ದಿ