ಶಿರಹಟ್ಟಿ: ಕತೃ ಫಕ್ಕೀರೇಶ್ವರರ ವಾಣಿಯಂತೆ ಫಕ್ಕೀರೇಶ್ವರ ಮಠಕ್ಕೆ ದಿಂಗಾಲೇಶ್ವ ಶ್ರೀಗಳನ್ನು ಉತ್ತರಾಧಿಯಾಗಿ ನೇಮಕ ಮಾಡುತ್ತಿದ್ದೇನೆ. ಯಾರ ಒತ್ತಾಯವಿಲ್ಲ. ಯಾರು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಶಿರಹಟ್ಟಿ ಮಠದ ಶ್ರೀ ಜಗದ್ಗುರು ಫಕ್ಕೀರ ಸಿದ್ದರಾಮ ಸ್ವಾಮೀಜಿ ಹೇಳಿದ್ದಾರೆ.
ಶಿರಹಟ್ಟಿಯ ಶ್ರೀ ಜಗದ್ಗುರು ಫಕ್ಕೀರೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, 'ದಿಂಗಾಲೇಶ್ವರ ಸ್ವಾಮೀಜಿ ಸ್ವಲ್ಪ ಹಾರ್ಡ್ ಆಗಿದ್ದಾರೆ. ಅವರನ್ನು ಹಾರ್ಡ್‌ವೇರ್‌ನಿಂದ ಸಾಫ್ಟವೇರ್ ಆಗಿ ಮಾಡುವ ಜವಾಬ್ದಾರಿ ನನ್ನದು' ಎಂದರು.
ನೂತನ ಉತ್ತರಾಧಿಕಾರಿ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, 'ನನ್ನ ಮೇಲೆ ನೂರಾರು ಮಠಗಳ ಸ್ವಾಮೀಜಿಗಳ ಪ್ರೀತಿ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಶ್ರೀ ಜಗದ್ಗುರು ಫಕ್ಕೀರ ಸಿದ್ದರಾಮ ಸ್ವಾಮೀಜಿಗಳ ಆಶೀರ್ವಾದ ನನ್ನ ಮೇಲಿದೆ. ಅವರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತೇನೆ. ನಾನು ಸ್ವಂತಕ್ಕೆ ಒಂದು ಪೈಸೆಯನ್ನು ಬಳಸುವದಿಲ್ಲ ಎಂದು ಪ್ರತಿಜ್ಞೆ ಮಾಡಿದರು.
ಈ ಸಂದರ್ಭದಲ್ಲಿ ಸ್ವಾಮೀಜಿಗಳಾದ ಬಸವಣ್ಣ, ಬಸವದೇವರು, ಚಂದ್ರಶೇಖರ ದೇವರು, ರಾಚೋಟೇಶ್ವರ ಸ್ವಾಮೀಜಿ, ಚನ್ನವೀರ ದೇವರು, ಶಿವಬಸವ, ಚನ್ನವೀರ ಸ್ವಾಮೀಜಿ, ನೀಲಗುಂದದ ಗುದ್ನೇಶ್ವರ ಸ್ವಾಮೀಜಿ ಮಂಟೂರಿನ ಶಿವಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು.
ವರದಿ: ಪ್ರದೀಪ ಗೊಡಚಪ್ಪನವರ
PublicNext
04/02/2022 09:12 pm