ಚಾಮರಾಜನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೊಂದಿಗೆ ಊಟ, ತಿಂಡಿಗೆ ಹೋಗೋದು ಕೂಡ ತಪ್ಪಾ? ಅವರೊಂದಿಗೆ ಯಾರೂ ಊಟಕ್ಕೆ ಹೋಗುವ ಹಾಗಿಲ್ವಾ? ಎಂದು ಸಚಿವ ವಿ. ಸೋಮಣ್ಣ ಪ್ರಶ್ನಿಸಿದ್ದಾರೆ
ಬಿಜೆಪಿ ಶಾಸಕರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತಿದ್ದಾರೆ ಎಂಬ ವದಂತಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ಕಾಸ್ಮೋ ಪಾಲಿಟಿನ್ ಸಿಟಿ. ಯಾರೂ ಎಲ್ಲಿಗೆ ಹೋಗುತ್ತಾರೆ. ಎಲ್ಲಿಗೆ ಬರುತ್ತಾರೆ ಎಂದು ಕಂಡು ಹಿಡಿಯುವುದಕ್ಕೆ ಆಗುವುದಿಲ್ಲ. ಯಾವುದೋ ರೆಸಾರ್ಟ್ ಡಿಕೆಶಿಗೆ ಮಾತ್ರ ಇರುತ್ತಾ? ಜೆಡಿಎಸ್, ಬಿಜೆಪಿಗೆ ಮಾತ್ರ ಇರುತ್ತಾ? ಅದು ಎಲ್ಲರಿಗೂ ರೆಸಾರ್ಟ್. ಅದು ಇರುವುದು ಕೆಲವರು ಆರಾಮವಾಗಿ ಇರುವುದಕ್ಕೆ. ನಮ್ಮಂತಹವರು ಇರುವುದು ಬೀದಿ ಸುತ್ತುವುದಕ್ಕೆ ಎಂದು ಹೇಳಿದರು.
ಇದೆಲ್ಲ ಮೈನರ್ ವಿಚಾರ. ಚುನಾವಣೆಗೆ ಇನ್ನೂ 15-16 ತಿಂಗಳು ಬಾಕಿ ಇದೆ. ಈ ಅವಧಿಯಲ್ಲಿ ನಾವೇನು ಮಾಡಬೇಕು, ಜಿಲ್ಲೆಯ ಅಭಿವೃದ್ಧಿಗೆ ಸಿಎಂ ಹತ್ತಿರ ಏನು ಒತ್ತಡ ತರಬೇಕು. ಈ ಬಗ್ಗೆ ನನಗೆ ಸಲಹೆ ಕೊಡಿ ಎಂದು ಸೋಮಣ್ಣ ಮಾಧ್ಯಮಗಳಿಗೆ ಮನವಿ ಮಾಡಿದರು.
PublicNext
26/01/2022 02:25 pm