ರಾಮನಗರ: ಮೇಕೆದಾಟು ಯೋಜನೆಗಾಗಿ ಕಾವೇರಿ-ಅರ್ಕಾವತಿ ಸಂಗಮ ಸ್ಥಳದಿಂದ ಕಾಂಗ್ರೆಸ್ ನಾಯಕರು ಪಾದಯಾತ್ರೆ ಆರಂಭಿಸಿದ್ದರು.
ನಂತರ ಇದಕ್ಕೆ ರಾಜ್ಯ ಸರ್ಕಾರದಿಂದ ನಿರ್ಬಂಧ ಆದೇಶ ಜಾರಿಯಾದ ನಂತರ ನಾಯಕರು ರಾಮನಗರದಲ್ಲೇ ಪಾದಯಾತ್ರೆ ಮೊಟಕುಗೊಳಿಸಿದ್ದರು. ಹೀಗಾಗಿ ಪಾದಯಾತ್ರೆ ಆರಂಭವಾದ ಸಂಗಮ ಸ್ಥಳದಲ್ಲಿ ಬಿದ್ದಿದ್ದ ಕಸ ಸೇರಿದಂತೆ ಇತರ ತ್ಯಾಜ್ಯವನ್ನು ಕಾಂಗ್ರೆಸ್ ಕಾರ್ಯಕರ್ತರು ಸ್ವಚ್ಛಗೊಳಿಸಿದ್ದಾರೆ.
ರಸ್ತೆ ಉದ್ದಕ್ಕೂ ಪಾದಯಾತ್ರೆಗೆ ಬಂದಿದ್ದ ಜನರು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆದಿದ್ದರ ಪರಿಣಾಮವಾಗಿ ರಸ್ತೆ ಇಡೀ ಕಸಮಯವಾಗಿತ್ತು. ಪ್ಲಾಸ್ಟಿಕ್ ಬಾಟಲ್, ಕಬ್ಬಿನ ಜಲ್ಲೆ, ಊಟದ ಎಲೆ, ಹಣ್ಣಿನ ತ್ಯಾಜ್ಯಗಳನ್ನು ಎಸೆದಿದ್ದರು. ಇಂದು ಡಿಕೆಶಿ, ಡಿಕೆ ಸುರೇಶ್ ಸೂಚನೆ ಮೇರೆಗೆ ರಾಮನಗರ, ಕನಕಪುರ ಕಾಂಗ್ರೆಸ್ ಕಾರ್ಯಕರ್ತರು ತ್ಯಾಜ್ಯ ತೆರವುಗೊಳಿಸಿದ್ದಾರೆ.
PublicNext
15/01/2022 05:22 pm