ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇವರನ್ನು ನಕಲು ಮಾಡೋದು ಅಷ್ಟು ಸುಲಭವಲ್ಲ: ಸಚಿವ ಕೋಟ ಹೀಗಂದಿದ್ದು ಯಾರ ಬಗ್ಗೆ?

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಆರಂಭಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಮನಗರ ಜಿಲ್ಲೆಯ ಅರ್ಕಾವತಿ-ಕಾವೇರಿ ಸಂಗಮ ಸ್ಥಳದಲ್ಲಿ ಪೂಜೆ ಸಲ್ಲಿಸಿದ್ದರು. ಈ ವೇಳೆ ಆಯ ತಪ್ಪಿದ ಡಿಕೆಶಿ ನೆಲಕ್ಕೆ ಬಿದ್ದಿದ್ದರು. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ಇದೇ ವಿಚಾರವನ್ನು ಪರೋಕ್ಷವಾಗಿ ಲೇವಡಿ ಮಾಡಿರುವ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪ್ರಧಾನಿ ನರೇಂದ್ರ ಮೋಡಿ ಪ್ರಕೃತಿಗೆ ಪೂಜೆ ಸಲ್ಲಿಸುತ್ತಿರುವ ಫೋಟೋಗಳನ್ನು ಹಾಕಿ ಟ್ವೀಟ್ ಮಾಡಿದ್ದಾರೆ. "ಈ ಮನುಷ್ಯನನ್ನು (ನರೇಂದ್ರ ಮೋದಿ) ನಕಲು ಮಾಡುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಇವರಿಗೆ ಪ್ರಕೃತಿಯನ್ನು ಪ್ರೀತಿಸುವ ಸಹಜವಾದ ಗುಣವಿದೆ, ಹಾಗಾಗಿ ಪ್ರಕೃತಿಯೂ ಇವರನ್ನು ಬಾಚಿ ತಬ್ಬಿಕೊಳ್ಳುತ್ತದೆ. ಡಿ.ಕೆ ಶಿವಕುಮಾರ್ ಜಾರಿ ಬಿದ್ದಾಗ ನೆನಪಾಯಿತು" ಎಂದು ಕೋಟ ಶ್ರೀನಿವಾಸ್ ಪೂಜಾರಿ ಬರೆದುಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

10/01/2022 09:40 pm

Cinque Terre

32.59 K

Cinque Terre

7

ಸಂಬಂಧಿತ ಸುದ್ದಿ