ಬೆಂಗಳೂರು: ರಾಜ್ಯದಲ್ಲಿ ಇರೋ ವೀಕೆಂಡ್ ಕರ್ಫ್ಯೂ ಸದ್ಯಕ್ಕೆ ವಾಪಸ್ ತೆಗೆದುಕೊಳ್ಳುವ ಮಾತೇ ಇಲ್ಲ ಎಂದು ಬಸವರಾಜ್ ಬೊಮ್ಮಾಯಿ ಬೆಂಗಳೂರಲ್ಲಿ ಇವತ್ತು ಹೇಳಿದ್ದಾರೆ.
ಸಚಿವ ಸಂಪುಟ ಮುಗಿದ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಮಾಧ್ಯಮಕ್ಕೆ ಈ ಹೇಳಿಕೆ ಕೊಟ್ಟಿದ್ದಾರೆ. ಸದ್ಯಕ್ಕೆ ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯೋದಿಲ್ಲ. ಮುಂದಿನ ವಾರ ಪರಿಸ್ಥಿತಿಯನ್ನ ನೋಡಿಕೊಂಡೇ ಎಲ್ಲ ನಿರ್ಧಾರ ತೆಗೆದುಕೊಳ್ಳಲಾಗುವುದು ಅಂತಲೇ ಸಿಎಂ ಹೇಳಿಬಿಟ್ಟಿದ್ದಾರೆ.
ವೀಕೆಂಡ್ ಲಾಕ್ ಡೌನ್ ಕುರಿತು ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಈಗಿರೋ ವೀಕೆಂಡ್ ಕರ್ಫ್ಯೂನಿಂದ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳಿಗೂ ತೊಂದರೆ ಆಗಿಲ್ಲ.ಕೊರೊನಾ ನೋಡಿಕೊಂಡೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಅಂತಲೇ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
PublicNext
06/01/2022 09:18 pm