ಹಾವೇರಿ: ವಿಧಾನ ಪರಿಷತ್ ಚುನಾವಣೆಯ ಮತದಾನದ ಹಿನ್ನಲೆಯಲ್ಲಿಂದು ಸಿಎಂ ಬಸವರಾಜ ಬೊಮ್ಮಾಯಿಯವರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕು ಪಂಚಾಯತಿ ಮತಗಟ್ಟೆಯಲ್ಲಿ ಮತದಾನ ಮಾಡುವ ಮೂಲಕ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಿದರು.
ಬಳಿಕ ಮಾತನಾಡಿದ ಅವರು,ಇಂದು ವಿಧಾನ ಪರಿಷತ್ತಿಗೆ ಚುನಾವಣೆ ನಡಿತಾ ಇದೆ. ಮತ ಚಲಾತಿಸಲು ಶಿಗ್ಗಾಂವಿಗೆ ಬಂದಿದ್ದೇನೆ. ಸ್ಪರ್ಧೆ ಮಾಡಿರುವ ಎಲ್ಲಾ ಸ್ಥಳಗಳಲ್ಲಿ ವಿಜಯ ಆಗುವ ಸಾಧ್ಯತೆ ಇದೆ ಆ ಪ್ರಯತ್ನವೂ ಇದೆ ಎಂದರು.
ಮೊನ್ನೆ ನಮ್ಮ ಸೇನಾದ ಮುಖ್ಯಸ್ಥ ಬಿಪಿನ್ ರಾವತ್ ತೀರಿ ಹೋಗಿದಾರೆ. ಅಕಾಲಿಕ ಹೆಲಿಕಾಪ್ಟರ್ ದುರಂತದಿಂದ ವೀರ ಮರಣ ಹೊಂದಿದ್ದರು. ಈ ವೇಳೆ ಕನ್ನಡ ನಾಡಿನ ಜನರ ಪರವಾಗಿ ಹೃದಯದಾಳದಿಂದ ಗೌರವ ಸಲ್ಲಿಸುತ್ತೇನೆ. ಆದರೆ ಈ ದುರಂತದಲ್ಲಿ ವರುಣ ಸಿಂಗ್ ಅವರು ಬದುಕುಳಿದಿದ್ದಾರೆ. ಅವರನ್ನು ನೋಡೋಕೆ ಅಂತಾ ಅವರ ಆರೋಗ್ಯ ವಿಚಾರಿಸಲು ಹೋಗಿದ್ದೆ.
ಅತ್ಯುತ್ತಮ ಚಿಕಿತ್ಸೆ ಸಿಗ್ತಾ ಇದೆ. ಪರಿಣತ ವೈದ್ಯರು ಚನ್ನಾಗಿ ನೋಡ್ತಾ ಇದ್ದಾರೆ. ಬೆಂಕಿಗೆ ಅವರ ದೇಹ ಸ್ಪರ್ಶ ಆಗಿದೆ ಅವರು ಬೇಗನೆ ಗಣುಮುಖರಾಗಿ ಬರಲೆಂದು ಪ್ರಾರ್ಥನೆಯನ್ನು ಮಾಡ್ತೇನಿ ಎಂದು ಅವರು ಹೇಳಿದರು.
ಸೇನಾ ದುರಂತವನ್ನು ಸಂಭ್ರಮಿಸಿದ ವಿಕೃತ ಮನಸ್ಸುಗಳ ವಿರುದ್ಧ ಸಿಎಂ ಭಾರಿ ಆಕ್ರೋಶ ವ್ಯಕ್ತಪಡಿಸಿದರು, ಕೆಲವರು ವಿಕೃತ ಮನಸ್ಸುಗಳು ಬೇಕಾಬಿಟ್ಟಿ ಟ್ವಿಟ್ ಗಳು ಮಾಡಿದ್ದಾರೆ. ಇದು ಭಾರತಿಯರು ತೀವ್ರವಾಗಿ ಖಂಡನೆ ಮಾಡಬೇಕು ನಾನು ಇದನ್ನು ತೀವ್ರ ಖಂಡನೆ ಮಾಡ್ತೇನಿ.
ಬೇಜವಾಬ್ದಾರಿಯಿಂದ ಈ ಕಾರ್ಯ ಮಾಡಿದ್ದಾರೆ.
ಇವತ್ತು ಅಂತವರ ಮೇಲೆ ಪೋಲಿಸರು ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಅಂತವರ ವಿರುದ್ಧ ಕೂಡಲೆ ಕೇಸ್ ಹಾಕಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶ ಮಾಡಿದ್ದೇನೆ. ಇದನ್ನು ಯಾರು ಕ್ಷಮಿಸ ಬಾರದು ಎಂದು ಅವರು ಹೇಳಿದರು.
ಮಹದಾಯಿ ಕೇಸ್ ಓಪನ್ ವಿಚಾರವಾಗಿ ಮಾತನಾಡಿದ ಅವರು, ರಿ ಓಪನ್ ಮಾಡಿಲ್ಲಾ ಕೋರ್ಟ್ ಕೂಡಾ ಮಾಡಿಲ್ಲಾ. ಅಂತವರಿಗೆ ಕೋರ್ಟ್ ಸಮನ್ಸ್ ಮಾಡಿದೆ ಅಷ್ಟೆ. ಆ ಪ್ರಕ್ರೀಯೆ ನಡಿತಾ ಇದೆ ಎಂದರು.
PublicNext
10/12/2021 12:53 pm