ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ:ಸಿದ್ದರಾಮಯ್ಯರಿಗಾಗಿ ನನ್ನ ಕ್ಷೇತ್ರ ತ್ಯಾಗ ಮಾಡಿದ್ದೀನಿ - ಚಿಮ್ಮನಕಟ್ಟಿ

ಬಾಗಲಕೋಟೆ: ವರುಣಾ ಬಿಟ್ಟು ಬಾದಾಮಿಗೆ ಬಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಚಿಮ್ಮನಕಟ್ಟಿ ವೇದಿಕೆಯಲ್ಲೇ ಪ್ರಶ್ನಿಸಿದ್ದಾರೆ. ಚಿಮ್ಮನಕಟ್ಟಿ ಮಾತನಾಡುತ್ತಲೇ ಉಭಯ ಬೆಂಬಲಿಗ ರಲ್ಲಿ ಅಸಮಾಧಾನ‌ ವ್ಯಕ್ತವಾಗಿದೆ ಹಾಗೂ ಭಾಷಣ ಸ್ಪಷ್ಟವಾಗಿ ಅರ್ಥವಾಗಾದೇ ಕಾರ್ಯಕರ್ತ ರಲ್ಲಿ ಕೆಲಕಾಲ ಗೊಂದಲ ಉಂಟಾಗಿದೆ.

ಸಿದ್ದರಾಮಯ್ಯರಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದು ನಾನು ಎಂದು

ಚಿಮ್ಮನಕಟ್ಟಿ ಭಾಷಣ ಆರಂಭಿಸುತ್ತಲೇ ಹೌದು ಹುಲಿಯ ಎಂದು ಅಭಿಮಾನಿಗಳು ಕೂಗಿದ್ದಾರೆ, ಇದರಿಂದ ಭಾವುಕರಾದ ಚಿಮ್ಮನಕಟ್ಟಿ,

ನಾನು ಹುಲಿಯಾನೇ, ಆದ್ರೆ ಈಗ ಇಲಿ ಆಗಿದ್ದೇನೆ.ನೀವು ಮಾಡಿದ್ರೆ ಹುಲಿಯಾನೂ ಆಗ್ತೀನಿ. ಮಂತ್ರಿನೂ ಆಗ್ತೀನಿ ಮುಖ್ಯಮಂತ್ರಿನೂ ಆಗ್ತೀನಿ ಎಂದರು.

ಮಾತು ಮುಂದುವರೆಸುತ್ತಾ ನೀವು ಮನಸ್ಸು ಮಾಡಿದ್ರೆ ಎಲ್ಲಾನು ಆಗುತ್ತೆ. ಮೈಸೂರು ವರುಣಾ ಮತ್ತು ಚಾಮುಂಡಿ ಎರಡು ಕ್ಷೇತ್ರದಲ್ಲಿ ಅವರಿಗೆ ಅವಕಾಶ ಇದೆ ಎಂದು ಸಿದ್ದರಾಮಯ್ಯ ಹೆಸರು ಹೇಳದೆ ಅಸಮಾಧಾನ ವ್ಯಕ್ತಪಡಿಸಿದರು.

ನನಗೆ ಈ ಕ್ಷೇತ್ರ ಬಿಟ್ರೆ ಯಾವುದೇ ಅವಕಾಶ ಇಲ್ಲ.ಅವರಿಗಾಗಿ ನಾನು ಕ್ಷೇತ್ರ ತ್ಯಾಗ ಮಾಡಿದ್ದೀನಿ.

ಅವರ ಕ್ಷೇತ್ರದಲ್ಲಿ ಅವರು ಗೆದ್ರೆ ಅವರಿಗೆ ಯೋಗ್ಯತೆ ಇರುತ್ತೆ ಎಂದು ತೆರಮರೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಚಿಮ್ಮನಕಟ್ಟಿ ಬಣ ವಿರೋಧ ವ್ಯಕ್ತಪಡಿಸಿದೆ.

ನಂತರ ಚಿಮ್ಮನಕಟ್ಟಿ ಭಾಷಣ ನಿಲ್ಲಿಸಲು ಕೆಲ ಮುಖಂಡರು ಮುಂದಾದರು. ಕೆಲ ಸಮಯ ಮೈಕ್ ಬಂದ್ ಮಾಡಿ ಭಾಷಣ ನಿಲ್ಲಿಸುವಂತೆ ಮನವಿ ಮಾಡಿ ನಂತರ ಕಾರ್ಯಕರ್ತರು ಅವರನ್ನು ಅವರ ಸೀಟಿಗೆ ಕರೆದುಕೊಂಡು ಹೋದರು.

Edited By : Nagesh Gaonkar
PublicNext

PublicNext

06/12/2021 03:24 pm

Cinque Terre

31.06 K

Cinque Terre

0

ಸಂಬಂಧಿತ ಸುದ್ದಿ