ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಿಯಾಂಕ್ ಖರ್ಗೆ ಹೆಸರು ಗಂಡೋ ಹೆಣ್ಣೋ ಗೊತ್ತೇ ಆಗಲ್ಲ: ಪ್ರತಾಪ್ ಸಿಂಹ ವ್ಯಂಗ್ಯ

ಮೈಸೂರು: ಮರಿ ಖರ್ಗೆ ಹೆಸರು ಗಂಡೋ ಅಥವಾ ಹೆಣ್ಣೋ ಎಂಬುವುದು ಗೊತ್ತೆ ಆಗುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್‌ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ಮೈಸೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರಿಯಾಂಕ್ ಖರ್ಗೆ ಮಾತಿಗೆ ತಿರುಗೇಟು ನೀಡಿದ್ದಾರೆ.

"ನಾನು ಪತ್ರಿಕೋದ್ಯಮದಿಂದ ಬಂದಂತಹ ವ್ಯಕ್ತಿ. ನಾನು ಪತ್ರಿಕೆ ಮೂಲಕವೇ ಘರ್ಜಿಸಿದ್ದಂತವನು. ಪೇಪರ್ ಸಿಂಹ ಅಂದರೆ ನನಗೆ ಯಾವುದೇ ಬೇಸರ ಇಲ್ಲ. ಪತ್ರಿಕೋದ್ಯಮದ ಮುಖಾಂತರ ಇಂದು ನಾನು ಮೈಸೂರು ಮತ್ತು ಕೊಡಗಿನಂತಹ ಕಷ್ಟದ ಎರಡು ಕ್ಷೇತ್ರಗಳಲ್ಲಿ ಸಂಸದನಾಗಿದ್ದೇನೆ. ನನ್ನ ಪ್ರಾಮಾಣಿಕ ಬರವಣಿಗೆ ಮೂಲಕ ನಾನು ಇಂದು ಈ ಸ್ಥಾನದಲ್ಲಿ ಕುಳಿತುಕೊಂಡಿದ್ದೇನೆ. ಆದ್ರೆ ನನ್ನನ್ನು ಪೇಪರ್ ಸಿಂಹ ಎಂದು ಹೇಳುತ್ತಿರುವ ಮರಿ ಖರ್ಗೆ ಹೆಸರು ಗಂಡೋ, ಹೆಣ್ಣೋ ಯಾರಿಗೂ ಗೊತ್ತೆ ಆಗುವುದಿಲ್ಲ. ಏಕೆಂದರೆ ಅವರು ರಾಜೀವ್ ಗಾಂಧಿ ಮಗಳ ಹೆಸರು ಇಟ್ಟುಕೊಂಡಿದ್ದಾರೆ. ಹೆಸರಿನಲ್ಲೂ ಕೂಡ ಸ್ವಂತತೆ ಇಲ್ಲ" ಎಂದು ಕುಟುಕಿದರು.

ಕಲಬುರಗಿಯಲ್ಲಿ ರಾಜಕೀಯ ಮಾಡಿ ಮಲ್ಲಿಕಾರ್ಜುನ ಖರ್ಗೆಯವರು ಬಾಬುರಾವ್ ಚಿಂಚನಸೂರ ಮತ್ತು ಇತರ ಕೆಲವು ನಾಯಕರನ್ನು ಮೂಲೆಗುಂಪು ಮಾಡಿ ತಮ್ಮ ಮಗನಿಗೆ ಮಂತ್ರಿಸ್ಥಾನ ಕೊಡಿಸಿದರು. ಬಡವರು, ಶೋಷಿತರು, ದಲಿತರು, ತುಳಿತಕ್ಕೊಳಗಾದವರು ಎಂದು ಹೇಳಿಕೊಂಡು ಬೆಂಗಳೂರಿನಲ್ಲಿ ನಾಲ್ಕು ನಾಲ್ಕು ಮನೆ ಕಟ್ಟಿಸಿಕೊಂಡು ಐಷಾರಾಮಿ ಕಾರುಗಳನ್ನಿಟ್ಟುಕೊಂಡು ಓಡಾಡುವವರು ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲು ಬಗ್ಗೆ ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆಯನ್ನು ಕೇಳಿದಂತೆ ನನಗೆ ಭಾಸವಾಗುತ್ತಿದೆ ಎಂದು ಆರೋಪಿಸಿದರು.

Edited By : Vijay Kumar
PublicNext

PublicNext

14/11/2021 03:24 pm

Cinque Terre

68.51 K

Cinque Terre

45

ಸಂಬಂಧಿತ ಸುದ್ದಿ