ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುವವರು ಅಲ್ಪಬುದ್ಧಿಯವರು: ಸಚಿವ ಸುನಿಲ್ !

ಉಡುಪಿ: ರಾಷ್ಟ್ರೀಯ ಶಿಕ್ಷಣ ನೀತಿ ಕನ್ನಡಕ್ಕೆ ಮಾರಕ ಎಂದು ಹೇಳಿರುವ ಸಿಎಫ್ ಐ ಸಂಘಟನೆ ಕರಾಳ ದಿನಾಚರಣೆಗೆ ಕರೆ ನೀಡಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ,ಯಾರೋ ಅಲ್ಪಬುದ್ಧಿ ಇರುವವರು ಈ ರೀತಿಯ ಮಾತುಗಳನ್ನಾಡುತ್ತಾರೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ.ಇದರಲ್ಲಿ ನಮ್ಮ ಭಾಷೆಗೆ ವಿಶೇಷ ಆದ್ಯತೆ ಕೊಡಲಾಗಿದೆ. ಅರ್ಧಂಬರ್ಧ ತಿಳಿದುಕೊಂಡವರು ಬೇರೆಬೇರೆ ವ್ಯಾಖ್ಯಾನಗಳನ್ನು ಮಾಡುತ್ತಾರೆ.ಬಡವರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ಸಿಗಲಿದೆ. ವಿರೋಧಿಸುವವರು ಪೂರ್ಣವಾದ ವಿವರ ನೋಡಿ ಮಾತನಾಡುವುದು ಒಳ್ಳೆಯದು ಎಂದು ಉಡುಪಿಯಲ್ಲಿ ಇಂಧನ ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

Edited By : Manjunath H D
PublicNext

PublicNext

01/11/2021 11:55 am

Cinque Terre

45.06 K

Cinque Terre

0

ಸಂಬಂಧಿತ ಸುದ್ದಿ