ಮಂಗಳೂರು: ಡಿಕೆಶಿ ಆಪ್ತ ಯು.ಬಿ.ಶೆಟ್ಟಿ ಮೇಲೆ ಐಟಿ ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. ಐಟಿ ದಾಳಿ ಬಗ್ಗೆ ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಆದ್ರೆ ಅದು ಸಂಬಂಧ ಪಟ್ಟ ಇಲಾಖೆ ಕೆಲಸ ಅದು.ವ್ಯಾರು ಟ್ಯಾಕ್ಸ್ ಕಟ್ಟದೇ ಹಣ ಗಳಿಸ್ತಾರೋ ಅವರ ಮೇಲೆ ದಾಳಿ ನಡೆಸ್ತಾರೆ. ಇದೆಲ್ಲಾ ಕ್ಷಣಮಾತ್ರದ ನಿರ್ಧಾರ ಅಲ್ಲ, ಬಹಳ ವ್ಯವಸ್ಥಿತವಾಗಿ ಆಗುವಂತದ್ದು. ಸಾಕಷ್ಟು ತನಿಖೆ ನಡೆದು ತನಿಖಾಧಿಕಾರಿಗಳು ತೆಗೆದುಕೊಳ್ಳೋ ನಿರ್ಧಾರ. ಇಲಾಖೆಗಳಲ್ಲಿ ಅಲ್ಲೇ ಡ್ರಾ, ಅಲ್ಲೇ ಬಹುಮಾನ ಇರಲ್ಲ, ಸ್ವಂತ ಯೋಚನೆಯಲ್ಲಿ ಕೆಲಸ ಮಾಡುತ್ತದೆ. ಯಾರಿಗೋ ಆಪ್ತರು ಅನ್ನೋ ಕಾರಣಕ್ಕೆ ರೈಡ್ ಖಂಡಿತಾ ಆಗಲ್ಲ. ಕಾನೂನು ಉಲ್ಲಂಘಿಸಿ ಟ್ಯಾಕ್ಸ್ ಕಟ್ಟದೇ ಇರೋರ ಮೇಲೆ ರೈಡ್ ಆಗುತ್ತೆ. ಇಂತಹ ರೈಡ್ ಗಳು ನಡೆಯೋದು ಸಮಾಜ ಮತ್ತು ದೇಶಕ್ಕೆ ಒಳ್ಳೆಯದು. ಎಲ್ಲರೂ ಸರಿಯಾಗಿ ಟ್ಯಾಕ್ಸ್ ಕಟ್ಟಲಿ ಎಂದರು.
PublicNext
29/10/2021 12:56 pm