ಮುಂಬೈ: 'ನಾನು ಬಿಜೆಪಿ ಸಂಸದ. ಹೀಗಾಗಿ ಜಾರಿ ನಿರ್ದೇಶನಾಲಯ (ಇ.ಡಿ) ನನ್ನ ಹಿಂದೆ ಬೀಳಲ್ಲ ಎಂದು ಮಹಾರಾಷ್ಟ್ರದ ಬಿಜೆಪಿ ಸಂಸದ ಸಂಜಯ್ ಪಾಟೀಲ್ ಹೇಳಿದ್ದಾರೆ. ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಸಾಂಗ್ಲಿಯ ಬಿಜೆಪಿಯ ಲೋಕಸಭಾ ಸದಸ್ಯ ಸಂಜಯ್ ಪಾಟೀಲ್ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ನಿನ್ನೆ (ಭಾನುವಾರ) ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಜಯ್ ಪಾಟೀಲ್, "ನಾನು ಬಿಜೆಪಿ ಸಂಸದನಾಗಿರುವುದರಿಂದ ಇಡಿ ನನ್ನ ಮೇಲೆ ದಾಳಿ ಮಾಡುವುದಿಲ್ಲ. 40 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳನ್ನು ಖರೀದಿಸಲು ನಾವು ಸಾಲ ತೆಗೆದುಕೊಳ್ಳಬೇಕಾಗಿದೆ. ನಮ್ಮಲ್ಲಿರುವ ಸಾಲದ ಮೊತ್ತವನ್ನು ನೋಡಿದರೆ ಇಡಿ ಆಶ್ಚರ್ಯವಾಗುತ್ತದೆ" ಎಂದು ತಮಾಷೆ ಮಾಡಿದ್ದಾರೆ.
ಇಂಥ ಹೇಳಿಕೆ ನೀಡಿದವರಲ್ಲಿ ಸಂಜಯ್ ಪಾಟೀಲ್ ಮೊದಲಿಗರಲ್ಲ. "ನಾನು ಬಿಜೆಪಿಗೆ ಸೇರಿದ ನಂತರ ಯಾವ ತನಿಖೆಗಳ ಭಯವೂ ಇಲ್ಲದ ಕಾರಣ ನೆಮ್ಮದಿಯಾಗಿ, ಗೊರಕೆ ಹೊಡೆಯುತ್ತಾ ನಿದ್ರೆ ಮಾಡುತ್ತಿದ್ದೇನೆ" ಎಂದು ಬಿಜೆಪಿ ನಾಯಕ ಹರ್ಷವರ್ಧನ್ ಪಾಟೀಲ್ ಹೇಳಿದ್ದರು. ಈ ಬೆನ್ನಲ್ಲೇ ಇನ್ನೋರ್ವ ಬಿಜೆಪಿ ನಾಯಕ ಸಂಜಯ್ ಪಾಟೀಲ್ ಅವರ ಈ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.
PublicNext
25/10/2021 05:59 pm