ಬೆಂಗಳೂರು:ರಾಜ್ಯ ಕಾಂಗ್ರೆಸ್ ಮತ್ತು ಬಿಜೆಪಿ ಟ್ವಿಟರ್ ವಾರ್ ಎಲ್ಲೆ ಮೀರುತ್ತಿದೆ. ಇದರ ಹೊಡೆತಕ್ಕೆ ಎರಡೂ ಪಕ್ಷದ ಪ್ರಧಾನಿಗಳ ಮಾನ ಮರ್ಯಾದೆ ಕಳೆದು ಹೋಗುತ್ತಿದೆ.
ಹೌದು. ಪ್ರಧಾನಿ ನರೇಂದ್ರ ಮೋದಿಯನ್ನ ರಾಜ್ಯ ಕಾಂಗ್ರೆಸ್ ಮೌನೇಂದ್ರ ಶೋಕಿವಾಲಾ ಅಂತ ಟೀಕಿಸಿದೆ. ಅದನ್ನ ಕೇಳಿದ ಬಿಜೆಪಿ ಸುಮ್ಮನೆ ಇರುತ್ತದೆಯೇ. ನೋ ವೇ ಚಾನ್ಸ್ ಇಲ್ಲ. ಅದು ಕೂಡ ಟಾಂಗ್ ಕೊಟ್ಟಿದೆ.ಹೀಗೆ
ಪ್ರೀತಿಯ ಕಾಂಗ್ರೆಸ್ ಪಕ್ಷ,
ನಮ್ಮ ಪ್ರಧಾನಿ ನಿಮ್ಮ ನಾಯಕರಿಗಿಂತ ವಿಭಿನ್ನವಾಗಿದ್ದಾರೆ. ಪ್ರಧಾನಿಯಾಗಿ ಇನ್ಬೊಬ್ಬ ಮಹಿಳೆಯ ಸಿಗರೇಟ್ ಗೆ ಬೆಂಕಿ ಹಚ್ಚಲಿಲ್ಲ. ಬಾರ್ ನಲ್ಲಿ ಡ್ಯಾನ್ಸ್ ಮಾಡಲಿಲ್ಲ. ಮಾದಕ ವಸ್ತು ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿಲ್ಲ. ನಮ್ಮ ಪ್ರಧಾನಿ ದೇಶಕ್ಕೆ ಸಮರ್ಪಿತರು ಹೊರತು ತಮ್ಮ ಕುಟುಂಬಕ್ಕಲ್ಲ ಅಂತಲೇ ಕಾಂಗ್ರೆಸ್ ಪಕ್ಷದ ಮಾಜಿ ಪ್ರಧಾನಿಯ ಜನ್ಮವನ್ನ ಟ್ವಿಟರ್ ಮೂಲಕ ಜಾಲಾಡಿದೆ ಬಿಜೆಪಿ ಪಕ್ಷ.
PublicNext
18/10/2021 06:52 pm