ದಾವಣಗೆರೆ: ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅವರು ದಲಿತ ಕುಟುಂಬದವರ ಜೊತೆ ಉಪಹಾರ ಸೇವಿಸಿ ತಮ್ಮ ತಟ್ಟೆಯನ್ನು ತಾವೇ ತೊಳೆದು ಸರಳತೆ ಮೆರೆದಿದ್ದಾರೆ.
ಶಾಸಕ ರೇಣುಕಾಚಾರ್ಯ ಅವರ ತವರು ಕ್ಷೇತ್ರ ಹೊನ್ನಾಳಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ನಿಮಿತ್ತ ಗ್ರಾಮ ವಾಸ್ತವ್ಯದಲ್ಲಿದ್ದಾರೆ. ತಾಲೂಕಿನ ಕೂದೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಯುತ್ತಿದ್ದು, ಈ ವೇಳೆ ಆರ್.ಅಶೋಕ್ ಮತ್ತು ರೇಣುಕಾಚಾರ್ಯ ದಲಿತ ಕುಟುಂಬದವರ ಜೊತೆ ಉಪಹಾರ ಸೇವಿಸಿದ್ದಾರೆ.
ಉಪಹಾರ ಸೇವನೆ ಬಳಿಕ ರೇಣುಕಾಚಾರ್ಯ ತಮ್ಮ ತಟ್ಟೆಯನ್ನು ಇತರರಿಗೆ ಕೊಡದೆ ಯಾವ ಹಮ್ಮು ಬಿಮ್ಮು ಇಲ್ಲದೇ ತಾವೇ ಖುದ್ದು ಅಡುಗೆ ಮನೆಗೆ ತೆರಳಿ ತಮ್ಮ ತಟ್ಟೆಯನ್ನು ತೊಳೆದಿದ್ದಾರೆ. ಸದ್ಯ ಶಾಸಕರ ಈ ಸರಳತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ತಟ್ಟೆ ತೊಳೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
17/10/2021 04:22 pm