ತುಮಕೂರು: ಪಕ್ಷ ದ್ರೋಹ ಮಾಡುವ ಮಟ್ಟಕ್ಕೆ ಬಂದಿದೆ. ಎಲ್ಲೋ ಒಂದು ಕಡೆ ನನಗೆ ಪಕ್ಷ ದ್ರೋಹ ಮಾಡುತ್ತಿದೆ. ಹೀಗಾಗಿ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ತುರುವೇಕೆರೆ ಶಾಸಕ ಮಸಾಲ ಜಯರಾಂ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕೆಲವೊಂದಿಷ್ಟು ಬೇಡಿಕೆಗಳಿವೆ. ನಾವು ಕೇಳುವಷ್ಟು ಕೇಳಿದ್ದೇವೆ. ಆದರೆ ನಾಯಕರಿಂದ ಯಾವುದೇ ಉತ್ತರ ಸಿಕ್ಕಿಲ್ಲ. ರಾಜ್ಯಾಧ್ಯಕ್ಷರನ್ನ ಕೇಳಿದ್ದೇವೆ, ಮುಖ್ಯಮಂತ್ರಿಯನ್ನೂ ಕೇಳಿದ್ದೇವೆ. ಇದೇ ರೀತಿ ನಮ್ಮನ್ನು ಅವರು ಕಡೆಗಣಿಸಿದ್ರೆ ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಇರೋಲ್ಲ. ಪಕ್ಷದಲ್ಲಿ ಇರೋಲ್ಲಾ ಅಂದ್ರೆ ರಾಜಕೀಯನೇ ಕಡೆ ಮಾಡ್ತೀವಿ. ಶಾಸಕ ಸ್ಥಾನ ಹಾಗೂ ಪಕ್ಷದ ಸದಸ್ಯತ್ವಕ್ಕೂ ರಾಜೀನಾಮೆ ನೀಡಬೇಕಾಗುತ್ತೆ ಎಂದು ಎಚ್ಚರಿಸಿದರು.
ನಮ್ಮ ತಾಳ್ಮೆಗೂ ಒಂದು ಸಹಕಾರ ಇರಬೇಕು ಈ ತಿಂಗಳ ಅಂತ್ಯಕ್ಕೆ ಗಡವು ಕೊಟ್ಟಿದ್ದೇವೆ. ನವಂಬರ್ ಅಂತ್ಯದವರೆಗೂ ನೋಡ್ತೀವಿ, ನಾವೇನೂ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲಾ. ಒಳ್ಳೆಯ ನಿಗಮ ಕೊಡಿ ಅಂತಾ ಕೇಳಿದ್ದೇವೆ, ಕೊಟ್ರೆ ಕೊಡಲಿ ಇಲ್ಲದಿದ್ರೆ ನಾವು ಏನ್ ಮಾಡಬೇಕೋ ಮಾಡ್ತೀವಿ. ಜನ ಓಟ್ ಹಾಕಿದ್ದಾರೆ ಅವರಿಗೆ ತೃಪ್ತಿ ಆಗುವ ಕೆಲಸ ಮಾಡಿದ್ದೇನೆ. ಯಾವುದಾದ್ರು ಸರಿ ಒಳ್ಳೆದೊಂದು ನಿಗಮ ಕೊಡಿ. ಸಾಂಬಾರು ಅಭಿವೃದ್ಧಿ ನಿಗಮದಲ್ಲಿ ಹತ್ತು ರೂಪಾಯಿ ದುಡ್ಡಿಲ್ಲ. ನಾನೇ ಊಟ ತಗೋಂಡೋಗಿ ಕೊಟ್ಟು ಬರಬೇಕಾಗಿದೆ ಎಂದ ಶಾಸಕ ಮಸಾಲ ಜಯರಾಂ ಅಸಮಾಧಾನಿತರಾಗಿದ್ದಾರೆ.
PublicNext
14/10/2021 02:57 pm