ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಪಿ ಚುನಾವಣಾ ಕದನ ಶುರು: ಮೋದಿ ಸ್ವಕ್ಷೇತ್ರದಲ್ಲಿ ದುರ್ಗಾ ದೇವಿಗೆ ಪೂಜೆ ಸಲ್ಲಿಸಿದ 'ಕೈ' ನಾಯಕಿ

ನವದೆಹಲಿ: ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಪ್ರಧಾನಿ ನರೇಂದ್ರ ಮೋದಿ ಸ್ವಕ್ಷೇತ್ರ ವಾರಣಾಸಿಯ ಮಾ ದುರ್ಗಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಭಗೇಲ್​ ಹಾಗೂ ಸಂಸದ ದೀಪೇಂದ್ರ ಸಿಂಗ್​ ಹೂಡಾ ಪ್ರಿಯಾಂಕಾ ಗಾಂಧಿ ಅವರಿಗೆ ಸಾಥ್ ನೀಡಿದರು.

ರೋಹಿನ್ಯಾ ಕ್ಷೇತ್ರದಲ್ಲಿ ರೈತ ನ್ಯಾಯ ಎಂಬ ಬೃಹತ್​ ಸಮಾವೇಶದಲ್ಲಿ ಕಾಂಗ್ರೆಸ್​ ನಾಯಕರು ಭಾಗಿಯಾಗಲು ವಾರಣಾಸಿಗೆ ಭೇಟಿ ನೀಡಿದರು. ಮೊದಲಿಗೆ ವಾರಣಾಸಿಯ ಪುಣ್ಯಕ್ಷೇತ್ರ ಕಾಶಿವಿಶ್ವನಾಥ್​ ದೇವಾಯಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಮಾ ದುರ್ಗಾ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು.

Edited By : Vijay Kumar
PublicNext

PublicNext

10/10/2021 06:17 pm

Cinque Terre

92.59 K

Cinque Terre

9

ಸಂಬಂಧಿತ ಸುದ್ದಿ