ಕೊಪ್ಪಳ: ಬಿಜೆಪಿ ಮುಖಂಡರು ಯಾರಾದರು ಸತ್ತರೆ ಒಂದು ಕೋಟಿ ರೂಪಾಯಿ ಪರಿಹಾರ ಕೊಡ್ತೀವಿ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ಲಿಖಿಂಪುರದಲ್ಲಿ ರೈತರ ಮೇಲೆ ವಾಹನ ಹರಿಸಿದ ಘಟನೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯನ್ನು ಖಂಡಿಸಿ ಕುಷ್ಟಗಿಯಲ್ಲಿ ನಡೆದ ಪ್ರತಿಭಟನೆ ಶಾಸಕ ಅಮರೇಗೌಡ ಬಯ್ಯಾಪುರ ಬಿಜೆಪಿ ವಿರುದ್ಧ ಕಿಡಿಕಾರಿದರು. 'ಲಿಖಿಂಪುರ ಘಟನೆಯಲ್ಲಿ ಮೃತಪಟ್ಟ ರೈತರಿಗೆ ಕೇವಲ 45 ಲಕ್ಷ ರೂ. ಪರಿಹಾರ ಕೊಟ್ಟಿದ್ದಾರೆ. ಸಂಸದ, ಕೇಂದ್ರ ಸಚಿವರ ಮಗ ಕಾರು ಹಾಯಿಸಿ ಸಾಯಿಸಿದರೂ, ಬಿಜೆಪಿಯವರು ಯಾರೂ ಮಾತನಾಡ್ತಿಲ್ಲ' ಎಂದು ಗುಡುಗಿದರು.
PublicNext
06/10/2021 09:27 am