ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಬಿಜೆಪಿ ಸೇರುತ್ತಿಲ್ಲ, ಕಾಂಗ್ರೆಸ್​ನಲ್ಲಿ ಇರಲ್ಲ': ಕ್ಯಾಪ್ಟನ್ ಅಮರೀಂದರ್ ಸಿಂಗ್

ನವದೆಹಲಿ: 'ನಾನು ಬಿಜೆಪಿ ಪಕ್ಷನ್ನೂ ಸೇರುತ್ತಿಲ್ಲ, ಕಾಂಗ್ರೆಸ್​ ಪಕ್ಷದಲ್ಲೂ ಮುಂದುವರಿಯಲ್ಲ. ಅಲ್ಲಿ ನನ್ನನ್ನ ನಡೆಸಿಕೊಳ್ತಿರುವ ರೀತಿ ಸರಿ ಇಲ್ಲ' ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಅಮರೀಂದರ್ ಸಿಂಗ್, 'ಚುನಾವಣೆ ಸಮೀಪಿಸುತ್ತಿರುವಾಗಲೇ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವುದಕ್ಕೆ ಬೇಸರವಿದೆ. ಇಲ್ಲಿಯವರೆಗೂ ನಾನು ಕಾಂಗ್ರೆಸ್​ನಲ್ಲಿಯೇ ಇದ್ದೇನೆ. ಆದರೆ ಇನ್ನು ಈ ಪಕ್ಷದಲ್ಲಿ ಮುಂದುವರೆಯಲು ನನಗೆ ಇಷ್ಟವಿಲ್ಲ. ನನ್ನನ್ನು ಸೂಕ್ತ ರೀತಿಯಲ್ಲಿ ಪಕ್ಷ ನಡೆಸಿಕೊಂಡಿಲ್ಲ. ಇದರಿಂದ ನನಗೆ ಅವಮಾನ ಹಾಗೂ ಬೇಸರವಾಗಿದೆ' ಎಂದು ಅಸಮಾಧಾನ ಹೊರ ಹಾಕಿದರು.

'ನವಜೋತ್​ ಸಿಂಗ್ ಸಿಧು ರೀತಿಯ ಚೈಲ್ಡಿಶ್ ವ್ಯಕ್ತಿಗೆ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಜವಾಬ್ದಾರಿ ನೀಡಿದರು. ಆದರೆ ಆತ ಅದನ್ನು ಉಳಿಸಿಕೊಳ್ಳಲಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿರುವ ನಮ್ಮಂತಹವರಿಗೆ ಸೂಕ್ತ ಗೌರವ ಸಿಗುತ್ತಿಲ್ಲ. ನಾನು 52 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಮುಖ್ಯಮಂತ್ರಿಯಾಗಿದ್ದ ನನಗೆ ಬೆಳಗ್ಗೆ 10:30ಕ್ಕೆ ಕಾಂಗ್ರೆಸ್ ಅಧ್ಯಕ್ಷರು ಫೋನ್ ಮಾಡಿ ರಾಜೀನಾಮೆ ನೀಡಲು ಸೂಚಿಸಿದರು. ನಾನು ಅವರಿಗೆ ಯಾವ ಪ್ರಶ್ನೆಯನ್ನೂ ಕೇಳದೆ ಸಂಜೆ 4 ಗಂಟೆಗೆ ರಾಜ್ಯಪಾಲರ ಬಳಿ ಹೋಗಿ ರಾಜೀನಾಮೆ ನೀಡಿದೆ. 50 ವರ್ಷಗಳಾದರೂ ನಮ್ಮ ಪಕ್ಷದ ನಾಯಕರಿಗೆ ನನ್ನ ಮೇಲೆ ನಂಬಿಕೆ ಬಂದಿಲ್ಲ ಎಂದಾದರೆ ನಾನು ಈ ಪಕ್ಷದಲ್ಲಿದ್ದು ಏನೂ ಪ್ರಯೋಜನವಿಲ್ಲ ಎಂದೇ ಅರ್ಥ' ಎಂದು ಅಮರೀಂದರ್ ಸಿಂಗ್ ಬೇಸರ ಹೊರಹಾಕಿದ್ದಾರೆ.

Edited By : Vijay Kumar
PublicNext

PublicNext

30/09/2021 04:17 pm

Cinque Terre

55.2 K

Cinque Terre

5

ಸಂಬಂಧಿತ ಸುದ್ದಿ