ಬೆಂಗಳೂರು: ಉದ್ದೇಶಿತ ಚಾಣಕ್ಯ ಖಾಸಗೀ ವಿಶ್ವವಿದ್ಯಾಲಯಕ್ಕೆ ಭೂ ಹಂಚಿಕೆಯಲ್ಲಿ ನೂರಾರು ಕೋಟಿ ಅಕ್ರಮ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ .
ಈ ಬಗ್ಗೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ 'ಚಾಣಕ್ಯ' ಖಾಸಗೀ ವಿಶ್ವವಿದ್ಯಾಲಯ ಸ್ಥಾಪಿಸಲು ಬೆಲೆಬಾಳುವ ಭೂಮಿಯನ್ನು ಸರ್ಕಾರ ಸೆಸ್ ಎಂಬ ಶೈಕ್ಷಣಿಕ ಹಿನ್ನಲೆಯೇ ಇಲ್ಲದ ಸಂಸ್ಥೆಗೆ ನೀಡಿದೆ. ಸೆಸ್ (ಚಾಣಕ್ಯ ವಿವಿ ಸೆಂಟರ್ ಫಾರ್ ಎಜ್ಯುಕೇಶನ್ &ಸೋಶಿಯಲ್ ಸ್ಟಡೀಸ್) ಎಂಬ ಸಂಸ್ಥೆಯಲ್ಲಿ ಬಹುತೇಕರು ಆರ್.ಎಸ್.ಎಸ್ ಪ್ರಮುಖರೇ ಇದ್ದಾರೆ.
ಬೆಂಗಳೂರಿನ ದೇವನಹಳ್ಳಿ ಏರ್ ಪೋರ್ಟ್ ಹಿಂಭಾಗದ ಈ 116 ಎಕರೆ ಭೂಮಿಯನ್ನು ರಕ್ಷಣಾ ವಲಯದ ಕೈಗಾರಿಕೆಗಳನ್ನು ಸ್ಥಾಪಿಸಲು ಕೆಐಎಡಿಬಿ ವಶಪಡಿಸಿಕೊಂಡಿತ್ತು. ಈಗ ಅದರ ಮಾರುಕಟ್ಟೆ ಸುಮಾರು 400 ಕೋಟಿ ಆದರೆ ಸರ್ಕಾರ ಸೆಸ್ ಎಂಬ ಸಂಸ್ಥೆಗೆ ಕೇವಲ 50 ಕೋಟಿಗೆ ನೀಡಿದೆ. ಮತ್ತು ತರಾತುರಿಯಲ್ಲಿ ಧ್ವನಿಮತದ ಮೂಲಕ ಚಾಣಕ್ಯ ವಿಶ್ವವಿದ್ಯಾಲಯ ಮಸೂದೆಯನ್ನೂ ಅಂಗೀಕಾರ ಮಾಡಿದೆ. ಇದು ಈ ಸರ್ಕಾರದ ಬಹುದೊಡ್ಡ ಹಗರಣ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
PublicNext
22/09/2021 05:36 pm