ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮುಂದಿನ ವರ್ಷದ ಚುನಾವಣೆಗೆ ಎಲ್ಲ ಪಕ್ಷಗಳೂ ತಯಾರಿ ನಡೆಸಿವೆ. ಭಾರತೀಯ ಜನತಾ ಪಕ್ಷ ಕೂಡ ತಯಾರಿ ನಡೆಸಿದೆ. ಸದ್ಯ ಐದು ರಾಜ್ಯಗಳ ಉಸ್ತುವಾರಿಗಳ ಹೆಸರನ್ನು ಬಿಜೆಪಿ, ಬುಧವಾರ ಪ್ರಕಟಿಸಿದೆ.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಉತ್ತರ ಪ್ರದೇಶದ ಉಸ್ತುವಾರಿಯನ್ನು ಧರ್ಮೇಂದ್ರ ಪ್ರಧಾನ್ ಅವರಿಗೆ ನೀಡಲಾಗಿದೆ. ಧರ್ಮೇಂದ್ರ ಪ್ರಧಾನ್ ಮುಖ್ಯ ಉಸ್ತುವಾರಿಯಾಗಿರಲಿದ್ದಾರೆ.ಜೊತೆಗೆ 8 ಕೇಂದ್ರ ಸಚಿವರಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ಅನುರಾಗ್ ಠಾಕೂರ್, ಅರ್ಜುನ್ ರಾಮ್ ಮೇಘ್ವಾಲ್, ಸರೋಜ್ ಪಾಂಡೆ, ಶೋಭಾ ಕರಂದ್ಲಾಜೆ, ಕ್ಯಾಪ್ಟನ್ ಅಭಿಮನ್ಯು, ಅನ್ನಪೂರ್ಣ ದೇವಿ ಮತ್ತು ವಿವೇಕ್ ಠಾಕೂರ್ ಅವರಿಗೆ ಸಹ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ.
ಪಂಜಾಬ್ ಜವಾಬ್ದಾರಿಯನ್ನು ಕ್ಯಾಬಿನೆಟ್ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರಿಗೆ ನೀಡಲಾಗಿದೆ. ಪಂಜಾಬಿನಲ್ಲಿ, ಶೆಖಾವತ್ ಜೊತೆ ಹರ್ದೀಪ್ ಪುರಿ, ಮೀನಾಕ್ಷಿ ಲೇಖಿ, ವಿನೋದ್ ಚಾವ್ಡಾ ಇರಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉತ್ತರಾಖಂಡದ ಮುಖ್ಯ ಉಸ್ತುವಾರಿ ವಹಿಸಲಿದ್ದಾರೆ.
ಲಾಕೆಟ್ ಚಟರ್ಜಿ ಮತ್ತು ಸರ್ದಾರ್ ಆರ್ ಪಿ ಸಿಂಗ್ ಅವರು ಸಹ ಪ್ರಭಾರಿ ಪಾತ್ರ ವಹಿಸಲಿದ್ದಾರೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೋವಾ ಉಸ್ತುವಾರಿ ವಹಿಸಿಕೊಂಡ್ರೆ, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮಣಿಪುರದ ಉಸ್ತುವಾರಿ ಹೊರಲಿದ್ದಾರೆ.
PublicNext
08/09/2021 04:12 pm