ಮುಂಬೈ: ಅಪ್ಘಾನಿಸ್ತಾನದಲ್ಲಿನ ತಾಲಿಬಾನಿಗಳ ವಿಕೃತಿಯನ್ನು ಸಂಭ್ರಮಿಸುವ ಕೆಲವು ಭಾರತೀಯ ಮುಸ್ಲಿಮರೇ ನಿಮಗೆ ನಾಗರಿಕತೆ ಇದೆಯಾ?
ಹೀಗಂತ ಪ್ರಶ್ನೆ ಮಾಡಿದ್ದು ಬಾಲಿವುಡ್ ಹರಿಯ ನಟ ನಾಸಿರುದ್ದೀನ್ ಶಾ. ನಾವು ‘ಹಿಂದುಸ್ತಾನಿ ಇಸ್ಲಾಂ’ರು ಎಂದು ಕರೆದಿದ್ದು, ಈ ಆಚರಣೆ ನಮ್ಮ ಭಾರತದಲ್ಲಿ ಮಾತ್ರ ಸಾಧ್ಯ. ಇದನ್ನು ಪ್ರಪಂಚದ ಇತರ ಭಾಗಗಳಲ್ಲಿ ಆಚರಣೆ ಮಾಡುವುದಿಲ್ಲ. ಅವರ ಆಚರಣೆಗೂ ನಮಗೂ ತುಂಬಾ ವ್ಯತ್ಯಾಸವಿದೆ. ಭಾರತೀಯ ಇಸ್ಲಾಂ ಯಾವಾಗಲೂ ಪ್ರಪಂಚದಾದ್ಯಂತ ಇಸ್ಲಾಂ ಧರ್ಮಕ್ಕಿಂತ ಭಿನ್ನವಾಗಿದೆ ಎಂದು ಅವರು ಮಾತನಾಡಿದ ವಿಡಿಯೋ ಒಂದನ್ನು ಟ್ವೀಟ್ ಮಾಡಿದ್ದಾರೆ.
ತಾಲಿಬಾನ್ ವಿಚಾರದಲ್ಲಿ ಮುಸ್ಲಿಂರ ಅನಾಗರಿಕ ವರ್ತನೆಯಿಂದ ಬೇಸರಗೊಂಡಿದ್ದು, ದೇವರೆ ಬಂದರು ಜಗತ್ತನ್ನು ಗುರುತಿಸಲು ಸಾಧ್ಯವಾಗದಷ್ಟು ಬದಲಾಗಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
PublicNext
03/09/2021 09:28 am