ಬೆಂಗಳೂರು: 'ಪಿಕ್ಚರ್ ಅಭೀ ಬಾಕಿ ಹೈ' ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಆದರೆ ಥಿಯೇಟರ್ ಬಂದ್ ಹೈ, ಪಿಚ್ಚರ್ ಕೈಸಾ ಚಾಲೂ ಹೋತಾ ಹೈ ಎಂದು ನಾವು ಕಾಲೆಳೆದಿದ್ದೇವೆ ಎಂದು ಶಾಸಕ ರಾಜೂ ಗೌಡ ಹೇಳಿದ್ದಾರೆ.
ಖಾತೆ ವಿಚಾರವಾಗಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮುನಿಸಿಕೊಂಡಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೂ ಗೌಡ, "ಪಿಕ್ಚರ್ ಅಭೀ ಬಾಕಿ ಹೈ ಎಂದಿದ್ದೀಯಲ್ಲಣ್ಣ, ಕೊರೊನಾ ಇರುವುದರಿಂದ ಥೀಯೇಟರ್ ಬಂದ್ ಇದ್ದಾವೆ. ನೀನು ಎಲ್ಲಿ ಪಿಕ್ಚರ್ ಆರಂಭಿಸುತ್ತಿಯಣ್ಣ ಎಂದು ಹೀಗೆ ಮಾತನಾಡುತ್ತಿರುವಾಗ ಹಾಸ್ಯ ಮಾಡಿದ್ದೆವು" ಎಂದು ಸ್ಪಷ್ಟಪಡಿಸಿದರು.
ಸಚಿವ ಆನಂದ್ ಸಿಂಗ್ ಅವರಿಗೆ ಖಾತೆ ವಿಚಾರದಲ್ಲಿ ಅಸಮಾಧಾನ ಇರುವುದು ನಿಜ. ಆದರೆ ನಾವೆಲ್ಲ ಸ್ನೇಹಿತರು ಅವರಿಗೆ ಮಾತಾಡಿದ್ದೇವೆ. ಈಗ ಸಮಾಧಾನ ಆಗಿದ್ದಾರೆ. ಅವರ ಕ್ಷೇತ್ರದಲ್ಲಿ ಧ್ವಜಾರೋಹಣ ಕೂಡ ಮಾಡಿದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಆಗಮಿಸಿದಾಗ ಸಹ ಭೇಟಿ ಮಾಡಿದ್ದರು. ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಸಹ ಬರುತ್ತಾರೆ. ನಾವೂ ಸಚಿವ ಸ್ಥಾನದಲ್ಲಿ ಮುಂದುವರೆಯುವಂತೆ ಸಲಹೆ ನೀಡಿದ್ದೇವೆ ಎಂದರು.
PublicNext
21/08/2021 06:06 pm