ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಬಿಜೆಪಿಯವರು ಜನಾರ್ಶೀರ್ವಾದ ಯಾತ್ರೆ ಮಾಡುವ ಬದಲು ಕ್ಷಮೆಯಾಚನೆ ಯಾತ್ರೆ ಮಾಡಬೇಕಿತ್ತು : ಚಂದ್ರಪ್ಪ ಟೀಕೆ

ಚಿತ್ರದುರ್ಗ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ನಿಂದ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂಕಷ್ಟದ ನಡುವೆಯೂ ಬಿಜೆಪಿಯ ಜನಾರ್ಶೀವಾದ ಯಾತ್ರೆಯ ಅವಶ್ಯಕತೆ ಇರಲಿಲ್ಲ ಇದನ್ನು ಮಾಡುವ ಬದಲಿಗೆ ಕ್ಷಮೆಯಾಚನೆ ಮಾಡಬೇಕಿತ್ತು ಎಂದು ಬಿಜೆಪಿ ವಿರುದ್ಧ ಮಾಜಿ ಸಂಸದ ಚಂದ್ರಪ್ಪ ಟೀಕಿಸಿದ್ದಾರೆ. ಚಿತ್ರದುರ್ಗ ನಗರದ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಿಗೆ ಹೋದರು ಸುಳ್ಳಿನ ಕಂತೆ ಹೇಳುತ್ತಾರೆ. ಅವರ ಬತ್ತಳಿಕೆಯಲ್ಲಿ ಸುಳ್ಳು ಹೇಳುವುದು ಖಾಲಿಯಾಗಿವೆ ಎಂದರು. ಇಂದು ಸಚಿವರುಗಳು ಡಂಗೂರ ಹೊಡೆದುಕೊಂಡು, ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ಇಂತಹ ಯಾತ್ರೆ ಮಾಡುವ ಅವಶ್ಯಕತೆಯಿತ್ತಾ ಎಂದು ಬಿಜೆಪಿಗೆ ಪ್ರಶ್ನೆ ಮಾಡಿದರು.

ನಿಜವಾದ ಜನಾಶೀರ್ವಾದ ಕೇಳಬೇಕಾದವರು ಕಾಂಗ್ರೆಸ್ ಪಕ್ಷದವರು ಎಂದು ತಿಳಿಸಿದರು.ಬಿಜೆಪಿ ಆಡಳಿತದಲ್ಲಿ ಯಾವುದೇ ಜನಪರವಾದ ಬಿಲ್ ಪಾಸ್ ಆಗಿಲ್ಲ ಕೇವಲ,ಜನವಿರೋಧಿ ಕಾಯ್ದೆಗಳನ್ನು ಪಾಸ್ ಮಾಡುತ್ತಿದ್ದಾರೆ.ಸದಾಶಿವ ಆಯೋಗ ಜಾರಿ ಮಾಡುತ್ತೇವೆ ಅಂತ‌ ಹೇಳಿ ಮೋಸ ಮಾಡುತ್ತಿದ್ದಾರೆ ಎಂದರು.

ಇದರ ಜೊತೆಗೆ ಶಿರಾ ಉಪಚುನಾವಣೆಯಲ್ಲಿ ಮತ ಪಡೆಯಲು ಕಾಡುಗೊಲ್ಲ ಅಭಿವೃದ್ಧಿ ನಿಗಮ ಘೋಷಿಸಿ ಮತ ಪಡೆದರು. ಆದರೆ ಇದುವರೆಗೂ ಕಾಡುಗೊಲ್ಲ‌ ಅಭಿವೃದ್ಧಿ‌ ನಿಗಮಕ್ಕೆ ಯಾವುದೇ ಹಣ ನೀಡಿಲ್ಲ. ಶಿರಾ ಕ್ಷೇತ್ರದಲ್ಲಿ ಗೊಲ್ಲ ಸಮುದಾಯವನ್ನು ಅಭಿವೃದ್ಧಿ ನಿಗಮದ ಹೆಸರಲ್ಲಿ ಇಬ್ಭಾಗ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಅಂಬೇಡ್ಕರ್ ದೇವತಾ ಮನುಷ್ಯ ಅವರ ನಾಯಕತ್ವ, ಪ್ರೌಢಿಮೆಯನ್ನು ಹೊರ ತೆಗೆದಿದ್ದೆ ಕಾಂಗ್ರೆಸ್ ಪಕ್ಷದವರು ಎಂದು ತಿಳಿಸಿದರು.ದೇಶದ ಸಂವಿಧಾನ ಬರೆಯಲು ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್ ಪಕ್ಷ.

ಅಂಬೇಡ್ಕರ್ ಗೆ ಬಿಜೆಪಿ ಕೊಡುಗೆ ‌ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ..? ಅಂಬೇಡ್ಕರ್ ಮರಣ ಹೊಂದಿದಾಗ ಅಂತ್ಯ ಸಂಸ್ಕಾರಕ್ಕೆ ಜಾಗ ಕೊಡಲಾಗದಂತ ಕೀಳು ರಾಜಕಾರಣ ನಾವು ಮಾಡಿಲ್ಲ ಎಂದು ಬಿಜೆಪಿಯ ಆರೋಪಕ್ಕೆ ತಿರುಗೇಟು ನೀಡಿದರು. ಇನ್ನು ಮೀಸಲಾತಿ ವಿಚಾರವಾಗಿ ಅಪಪ್ರಚಾರ ಮಾಡಿಲ್ಲ.ಬಿಜೆಪಿ ಪಕ್ಷದ‌ ಮಾಜಿ ಸಚಿವ ಅನಂತಕುಮಾರ್ ಹೆಗ್ಡೆ ಸಂವಿಧಾನ ಬದಲಾವಣೆ ಮಾಡ್ತಿವಿ ಅಂತ ಹೇಳಿದ್ದರು. ಕಟ್ಟಿದ್ದನ್ನು ಬೀಳಿಸುವ ಕೆಲಸ ಮಾಡುವವರು ಬಿಜೆಪಿಯವರು ಎಂದರು.

Edited By : Manjunath H D
PublicNext

PublicNext

21/08/2021 01:46 pm

Cinque Terre

54.24 K

Cinque Terre

1

ಸಂಬಂಧಿತ ಸುದ್ದಿ